ಕೋಲಾರ: ಚಾಮರಾಜನಗರದ ಸುಳ್ವಾಡಿಯ ಮಾರಮ್ಮ ದೇವಿ ವಿಷ ಪ್ರಸಾದ ಮಾಸುವ ಮುನ್ನವೇ ಚಿಂತಾಮಣಿ ಗಂಗಮ್ಮ ಗುಡಿ ಪ್ರಸಾದ ದುರಂತ ನಡೆದು ಹೋಯಿತು. ಪ್ರಕರಣದ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು ಪೊಲೀಸರು ಇದುವರೆಗೂ ಯಾರನ್ನೂ ಬಂಧಿಸಿಲ್ಲ.
ಚಿಂತಾಮಣಿಯ ಗಂಗಮ್ಮ ದೇವಿ ಪ್ರಸಾದ ಸೇವಿಸಿ ಇಬ್ಬರು ಮೃತ ಪಟ್ಟಿರುವ ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಎಸ್ ಪಿ ಕಾರ್ತಿಕ್ ರೆಡ್ಡಿ ಹಲವು ಮಂದಿಯನ್ನು ವಿಚಾರಣೆಗೊಳಪಡಿಸಿದ್ದಾರೆ, ಆದರೆ ಇದುವರೆಗೂ ಯಾರೋಬ್ಬರ ಬಂಧನವಾಗಿಲ್ಲ.
ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸತ್ತಿರುವ ಪೊಲೀಸರು, ದೇವಾಲಯದ ಅರ್ಚಕ ಸುರೇಶ್, ಟ್ರಸ್ಟಿ ಲಕ್ಷ್ಮಿ, ಕೆಲಸದಾಕೆ ಅಮರಾವತಿ ಎಂಬುವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಚಿಂತಾಮಣಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೋಡಲ್ ಅಧಿಕಾರಿ ರಜಿನಿ ಕೋಲಾರ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ್ದರರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos