ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಮೈಸೂರು: ಪತ್ನಿಯ ಅಕ್ರಮ ಸಂಬಂಧ ರೆಡ್ ಹ್ಯಾಂಡ್ ಆಗಿ ಹಿಡಿಯಲು ಹೋದ ಪತಿಗೆ ಕಂಡಿದ್ದು?

ಎರಡು ಮಕ್ಕಳ ತಾಯಿಯಾಗಿದ್ದ ಮಹಿಳೆಯೊಬ್ಬರು ಪತಿಯ ವಿರೋಧದ ನಡುವೆಯೂ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಇದನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಹೋದ ಪತಿಗೆ ಅಲ್ಲಿನ ದೃಶ್ಯ...

ಸಂತೋಷ್-ಸುಮಿತ್ರ
Vishwanath S
Updated On : 2 Jul 2019, 12:06 pm
ಮೈಸೂರು: ಎರಡು ಮಕ್ಕಳ ತಾಯಿಯಾಗಿದ್ದ ಮಹಿಳೆಯೊಬ್ಬರು ಪತಿಯ ವಿರೋಧದ ನಡುವೆಯೂ ಇನ್ನೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು ಇದನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಹೋದ ಪತಿಗೆ ಅಲ್ಲಿನ ದೃಶ್ಯ ಕಂಡು ಶಾಕ್ ಆಗಿದ್ದಾನೆ.
ಮೈಸೂರಿನ ರಮಾಬಾಯಿನಗರದ ನಿವಾಸಿ 34 ವರ್ಷದ ಸಂತೋಷ್ ಎಂಬುವರು 35 ವರ್ಷದ ಸುಮಿತ್ರಾ ಎಂಬುವರೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದರು. ಇದನ್ನು ತಿಳಿದ ಕುಟುಂಬಸ್ಥರು ಕಳೆದ ಡಿಸೆಂಬರ್ ನಲ್ಲಿ ಪಂಚಾಯಿತಿ ಮಾಡಿಸಿ ಗ್ರಾಮದ ಮುಖಂಡರಿಂದ ಇಬ್ಬರಿಗೂ ದೂರವಿರುವಂತೆ ಎಚ್ಚರಿಸಿದ್ದರು. 
ಕಳದೆ ಗುರುವಾರ ಸುಮಿತ್ರಾ ಮನೆ ಬಿಟ್ಟು ಓಡಿ ಹೋಗಿದ್ದಳು. ಇದರಿಂದ ಕೋಪಗೊಂಡ ಪತಿ ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಪೊಲೀಸರನ್ನು ಕರೆದುಕೊಂಡು ರಮಾಬಾಯಿನಗರದಲ್ಲಿರುವ ಸಂತೋಷ್ ಕುಮಾರ್ ಮನೆಗೆ ಹೋಗಿ ಬಾಗಿಲು ಒಡೆದು ನೋಡಿದಾಗ ಸಂತೋಷ್ ಮತ್ತು ಸುಮಿತ್ರ ಒಂದೇ ಸೀರೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದೃಶ್ಯ ಕಂಡಿದೆ. ಈ ಸಂಬಂಧ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. 

Advertisement

Advertisement

ಸಂತೋಷ್ ಮತ್ತು ಸುಮಿತ್ರ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಪರಸ್ಪರ ಭೇಟಿಯಿಂದಾಗಿ ಅವರ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ವಿಪರ್ಯಾಸವೆಂದರೆ ಸುಮಿತ್ರ ಪತಿ ಸಿದ್ದರಾಜು ಕೂಡ ಅದೇ ಫ್ಯಾಕ್ಟರಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಸಂತೋಷ್ ಗೆ ಸಹ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement