ರಾಜ್ಯ

ಚಿಕ್ಕಬಳ್ಳಾಪುರ: ಫಾರೆಸ್ಟ್ ಗಾರ್ಡ್ ಕ್ರಿಕೆಟ್ ಆಡಿದ್ದಕ್ಕೆ ಡಿಎಫ್ ಓ ಮಾಡಿದ್ದೇನು?

Shilpa D
ಬೆಂಗಳೂರು: ಎಲ್ಲೆಡೆಯೂ ವಿಶ್ವಕಪ್ ಕ್ರಿಕೆಟ್ ಜ್ವರ, ಕ್ರಿಕೆಟ್ ಆಡಿದ ಕಾರಣ ಇಲ್ಲೊಬ್ಬ ಫಾರೆಸ್ಟ್ ಗಾರ್ಡ್ ಗೆ ಜಿಲ್ಲಾ ಅರಣ್ಯಾಧಿಕಾರಿ ವಿವರಣೆ ಕೋರಿ ನೊಟೀಸ್ ನೀಡಿದ್ದಾರೆ.
ಚಿಕ್ಕಬಳ್ಳಾಪುರ ವಿಭಾಗದ ಫಾರೆಸ್ಟ್ ಗಾರ್ಡ್  ಕೆ.ಆರ್ ಅವಿನಾಶ್ ಜೂನ್ 24 ರಂದು ಕೆಎಸ್ ಗಿಡ ಗ್ರಾಮದ ಯುವಕರ ಜೊತೆ ಕ್ರಿಕೆಟ್ ಆಡಿದ್ದರು. ಕರ್ತವ್ಯದ ಸಮಯದಲ್ಲಿ ಕ್ರಿಕೆಟ್ ಆಡಲು ತೆರಳಿದ್ದ ಅವಿನಾಶ್ ಗೆ ಜಿಲ್ಲಾ ಅರಣ್ಯಾಧಿಕಾರಿ  ರವಿಶಂಕರ್ ನೋಟಿಸ್ ನೀಡಿದ್ದಾರೆ
ಮರ ಹಾಗೂ ಗಿಡಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ, ಆದರೆ ದುರಾದೃಷ್ಟವಶಾತ್ ನೀವು ಕರ್ತವ್ಯದ ಅವಧಿಯಲ್ಲಿ ಕ್ರಿಕೆಟ್ ಆಡಲು ಹೋಗಿದ್ದಾರೆ, ಅದು ಬೆಳಗ್ಗೆಯೇ, ಇದು ನಿಮ್ಮ ನಿರ್ಲಕ್ಷ್ಯ ತೋರುತ್ತದೆ ಎಂದು ಹೇಳಿದ್ದಾರೆ.
ಕರ್ನಾಟಕ ನಾಗರಿಕ ಸೇವೆ ನಿಯಮದ ಅಡಿಯಲ್ಲಿ ಅವಿನಾಶ್ ಅವರಿಗೆ ನೋಟಿಸ್ ನೀಡಲಾಗಿದೆ, ಅವರಿಗೆ ಅಮಾನತು ಶಿಕ್ಷೆ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಗಿಡಗಳನ್ನು ಹಾಗೂ ಮರಗಳನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ,  ಇಂತಹ ಚಟುವಟಿಕೆಗಳಲ್ಲಿ ತೊಡಗುವ ಮುನ್ನ ಯೋಚಿಸಬೇಕು, ಕೆಲಸ ಮಾಡುವ ಬದಲು ಕ್ರಿಕೆಟ್ ಆಡಿದ್ದು ತಪ್ಪು ಎಂದು ತಿಳಿಸಿದ್ದಾರೆ.
ಅವಿನಾಶ್ ಅವರಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಆತನ ಪ್ರತಿಕ್ರಿಯೆ ನೋಡಿದ ನಂತರ ಮುಂದಿನ ಕ್ರಮ ಕೈಗೊಳ್ಳುತ್ತೆವೆ ಎಂದು ತಿಳಿಸಿದ್ದಾರೆ, ನೋಟೀಸ್ ನೀಡಿರುವುದು ಕೇವಲ ಎಚ್ಚರಿಕೆ ಯಾಗಿದೆ,  ಇದು ನಿರ್ಲಕ್ಷ್ಯ ಆಗಿದೆ, ಮೊದಲ ಬಾರಿಯಾದ್ದರಿಂದ ಕೇವಲ ಎಚ್ಚರಿಕೆ ನೀಡಿ ಬಿಟ್ಟುಬಿಡುವ ಸಾಧ್ಯತೆಯಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
SCROLL FOR NEXT