ಮೈಸೂರು: ಎಲ್ಲವೂ ಅಂದುಕೊಂಡಂತೆ ಆದರೆ 1 ಸಾವಿರ ಹಳೇಯ ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಶೀಘ್ರವೇ ಬೆಳ್ಳಿರಥ ಬರಲಿದೆ.
ಭಕ್ತಾದಿಗಳ ಮೆಚ್ಚಿನ ತಾಣವಾದ ನಂಜನಗೂಡು ಶ್ರೀಕಂಠೇಶ್ವರ ದೇವಾಲಯದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ.
ಈ ಯಾತ್ರಾ ಕೇಂದ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ಉಳಿದುಕೊಳ್ಳಲು 100 ಕೊಠಡಿಗಳನ್ನು ಹಾಗೂ ಸ್ನಾನಘಟ್ಟ ನಿರ್ಮಿಸಲು ಮುಂದಾಗಿದೆ. ಇದನ್ನು ಲೋಕೋಪಯೋಗಿ ಇಲಾಖೆ ನಿರ್ವಹಿಸಲಿದೆ.
ಜಿಲ್ಲಾಡಳಿತ ನಿರ್ಮಿಸಿದ್ದ ಸ್ನಾನದ ಸ್ಥಳ, ಪ್ರವಾಸಿಗರ ಬೇಡಿಕೆ ಈಡೇರಿಸಲು ವಿಫಲವಾಗಿತ್ತು, ಅದು ಅಶುದ್ಧತೆಯಿಂದ ಕೂಡಿತ್ತು, ಜೊತೆಗೆ ಪ್ರವಾಸಿಗರ ಬೇಡಿಕೆ ಈಡೇರಿಸಲು ಸಾಧ್ಯವಾಗಿರಲಿಲ್ಲ, ಈ ಸಂಬಂಧ ಈಗಾಗಲೇ ಸಿಎಂ ಕುಮಾರಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ ಎಂದು ನಂಜನಗೂಡು ಶಾಸಕ ಹರ್ಷವರ್ದನ ಹೇಳಿದ್ದಾರೆ.