ಕಲಬುರಗಿ: ಮುಂದಿನ ಸಲ ಮೋದಿ ಹೆಸರು ಹೇಳಿದರೆ ಬಾಯಲ್ಲಿ ಬೂಟು ಹಾಕುತ್ತೇವೆ ಎಂದು ಬಿಜೆಪಿ ಸಂಸದರ ವಿರುದ್ಧ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
ರಾಷ್ಟ್ರೀಯ ಹಿಂದು ಸೇನಾದ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ಸಂಸದರ ವಿರುದ್ಧ ಹರಿಹಾಯ್ದಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವಿರಾಟ ಹಿಂದು ಮಹಾಸಮಾವೇಶದಲ್ಲಿ ಮಾತನಾಡಿರುವ ಮುತಾಲಿಕ್, ಮುಂದಿನ ಸಲ ಮೋದಿ ಹೆಸರು ಹೇಳಿದ್ರೆ ಬಾಯಲ್ಲಿ ಬೂಟು ಹಾಕುತ್ತೇವೆ ಎಂದು ಬಿಜೆಪಿ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜು.1 ರಂದು ಅಫ್ಜಲ್ಪುರ ತಾಲೂಕಿನ ಮಣ್ಣೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರು ಸಲ ಗೆಲ್ಲುತ್ತೀರಿ, 25 ವರ್ಷ ಒಂದು ಜಿಲ್ಲೆಯನ್ನು ಆಳ್ವಿಕೆ ಮಾಡ್ತೀರಿ. ನಾಚಿಕೆ ಇಲ್ಲವಾ ನಿಮಗೆ. ನೀವೇನು ಮಾಡಿದ್ದೀರಿ. ಮೋದಿಯವರ ಮುಖ ನೋಡಿ, ಹಿಂದುತ್ವದ ವಿಚಾರ ನೋಡಿ ಮಾತ್ರ ಅವರಿಗೆ ನಾವು ವೋಟು ಹಾಕಿದ್ದೀವಿ. 5 ವರ್ಷ ಬಾಯಿಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಸಲ ಏನಾದರೂ ಮೋದಿ ಎಂದರೆ ಬಾಯಲ್ಲಿ ಬೂಟ್ ಹಾಕ್ತೀವಿ. ಏನು ಕತ್ತೆ ಕಾಯುತ್ತೀರಾ ಎಂದು ಹಿಗ್ಗಾಮುಗ್ಗ ಜಾಡಿಸಿದ್ದಾರೆ.