ಬೆಂಗಳೂರು: ಮನೆಯವರ ವಿರೋಧದ ನಡುವೆ ಮದುವೆಯಾಗಲು ಮುಂದಾಗಿದ್ದ ತಮಿಳುನಾಡಿನ ಜೋಡಿಯೊಂದು ಬೆಂಗಳೂರಿನ ರೆಸಾರ್ಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ ಸಹಾಯಕ ವ್ಯವಸ್ಥಾಪಕನಾಗಿರುವ ಶ್ರೀನಿವಾಸನ್ (34) ಹಾಗೂ ಅವರ ಮಹಿಳಾ ಸಹೋದ್ಯೋಗಿಯಾಗಿದ್ದ ಸತ್ಯಜ್ಯೋತಿ (27) ನೇಲಮಂಗಲ ಬಳಿಯ ತುಮಕೂರು ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರು ಧರ್ಮಪುರಿ ಮೂಲದವರಾಗಿದ್ದು ಅವರು ಬರೆದಿದ್ದ ಡೆತ್ ನೋಟ್ ನಲ್ಲಿ ಪೋಷಕರು ತಮ್ಮಿಬ್ಬರ ಸಂಬಂಧದ ಬಗೆಗೆ ಅಸಮಾಧಾನಗೊಂಡಿದ್ದಾರೆ ಎಂದು ಬರೆಯಲಾಗಿದೆ.
ಗುರುವಾರ ಮಧ್ಯಾಹ್ನ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋಲ್ಡನ್ ಪಾಮ್ಸ್ ರೆಸಾರ್ಟ್‌ನ ಸಿಬ್ಬಂದಿಯೊಬ್ಬರು ಘಟನೆ ಬಗೆಗೆ ಪೋಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪದೇ ಪದೇ ಬಾಗಿಲು ಬಡಿದರೂ ಒಅಳಗಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.ನಂತರ ನಮ್ಮ ಜತೆ ಇದ್ದ ಕೀಲಿಯಿಂದ ಬಾಗಿಲು ತೆರೆದಾಗ ಇಬ್ಬರೂ ಕೀಟನಾಶಕ ಸೇವಿಸಿ ಸಾವಿಗೀಡಾಗಿರುವುದು ಪತ್ತೆಯಾಗಿದೆ.
ಕಳೆದ ಹತ್ತು ವರ್ಷಗಳಿಂದ ಶ್ರೀನಿವಾಸನ್ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದು ಲವು ವರ್ಷಗಳ ಹಿಂದೆ ಅವರು ವಿವಾಹವಾಗಿದ್ದರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಸತ್ಯಜ್ಯೋತಿ ಇತ್ತೀಚೆಗೆ ಬ್ಯಾಂಕ್‌ಗೆ ಸೇರಿಕೊಂಡು ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಈ ಇಬ್ಬರೂ ಪ್ರೀತಿಯಲ್ಲಿ ತೊಡಗಿದ್ದು ಆಕೆಯ ಪೋಷಕರು ಈ ವಿಷಯವನ್ನು ತಿಳಿದಾಗ,ಸತ್ಯಜ್ಯೋತಿಗೆ ಆಕೆಯ ಸಂಬಂಧಿಯೊಬ್ಬರ ಜತೆ ನಿಶ್ಚಿತಾರ್ಥ ಮಾಡಿಕೊಳ್ಲುವಂತೆ ಒತ್ತಾಯಿಸಿದ್ದಾರೆ.ಇದರ ಬಗ್ಗೆ ಅಸಮಾಧಾನಗೊಂಡ ಶ್ರೀನಿವಾಸನ್ ಮತ್ತು ಸತ್ಯಜ್ಯೋತಿ ಮನೆಯಿಂಡ ಪಲಾಯನಮಾಡಿದ್ದಾರೆ ಸತ್ಯಜ್ಯೋತಿ ಅವರ ಪೋಷಕರು ಅದೇ ದಿನ ಧರ್ಮಪುರಿಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.
ಬುಧವಾರ ರಾತ್ರಿ 9 ಗಂಟೆಗೆ ಇವರಿಬ್ಬರು ರೆಸಾರ್ಟ್‌ಗೆ ಆಗಮಿಸಿ 6,000 ರೂ. ನೀಡಿ ಕೋಣೆ ಬಾಡಿಗೆಗೆ ಪಡೆಇದ್ದರು.ಗುರುವಾರ ಮಧ್ಯಾಹ್ನ ಕೋಣೆ ಖಾಲಿಯಾಗಬೇಕಾಗಿತ್ತು. ಆದರೆ ರೆಸಾರ್ಟ್ ಸಿಬ್ಬಂದಿ ಪರಿಶೀಲಿಸಲು ಇಬ್ಬರೂ ಆತ್ಮಹತ್ಯೆ ಂಆಡಿಕೊಂಡದ್ದು ಪತ್ತೆಯಾಗಿದೆ.. ರೆಸಾರ್ಟ್ ಸಿಬ್ಬಂದಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. "ಶವಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ" ಪೋಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos