ರಾಜ್ಯ

ಮಲೆನಾಡಿನಲ್ಲಿ ಮಳೆ: ಮತ್ತೆ ಜಲಪ್ರಳಯದ ಭೀತಿಯಲ್ಲಿ ಕೊಡಗು ಜನತೆ

Srinivas Rao BV
ಮಡಿಕೇರಿ: ಬಿಸಿಲ ಬೇಗೆಗೆ ಕಂಗಾಲಾಗಿದ್ದ ಮಲೆನಾಡಿನಲ್ಲಿ ಈಗ ಮಳೆ ಪ್ರಾರಂಭವಾಗಿದೆ. 
ಕಳೆದ ಬಾರಿ ಭೀಕರ ಮಳೆಗೆ ತುತ್ತಾಗಿದ್ದ ಕೊಡಗಿನಲ್ಲೂ ಮಳೆ ಸುರಿಯುತ್ತಿದ್ದು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಿದೆ. 
ಜು05 ರಂದು ಸುರಿದ ಮಳೆಗೆ ಮಡಿಕೇರಿ-ಮಂಗಳೂರು ಹೆದ್ದಾರಿಯ ರಸ್ತೆ ಕುಸಿದಿದೆ. ಭಾಗಮಂಡಲದಲ್ಲಿ ಸುರಿದ ಮಳೆಯಿಂದಾಗಿ ಕಾವೇರಿಯಲ್ಲಿ ನೀರಿನ ಪ್ರಮಾಣ ಹೆಚ್ಚಬಹುದೆಂಬ ಸಂತಸದಲ್ಲಿದ್ದಾರೆ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ರಾಜ್ಯದ ಜನತೆ ಆದರೆ ಕಳೆದ ಬಾರಿಯ ಕರಾಳತೆಯನ್ನು ಎದುರಿಸಿದ್ದವರಿಗೆ ಮಳೆ ಹೀಗೆಯೇ ಧಾರಾಕಾರವಾಗಿ ಮುಂದುವರೆದರೆ ಜಲಾವೃತಗೊಂಡು ಜನಸಂಪರ್ಕ ಕಳೆದುಕೊಳ್ಳುವ ಆತಂಕ ಎದುರಾಗಿದೆ.
SCROLL FOR NEXT