ರಾಜ್ಯ

ಅಕ್ರಮ ಗಣಿಗಾರಿಕೆ ಪ್ರಕರಣ; ಸಂಸದ ಡಿ ಕೆ ಸುರೇಶ್ ವಿರುದ್ಧದ ಕೇಸು ಖುಲಾಸೆ

Sumana Upadhyaya
ಬೆಂಗಳೂರು: ಸಂಸದ ಡಿ ಕೆ ಸುರೇಶ್ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಕನಕಪುರ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಸಂಸದ ಡಿ ಕೆ ಸುರೇಶ್ ಭಾಗಿಯಾಗಿದ್ದರು ಎಂದು ತನಿಖಾಧಿಕಾರಿಗಳು ಕೇಸು ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಸಂಸದ ಸುರೇಶ್ ವಿರುದ್ಧ ಕೇಸನ್ನು ಕೈಬಿಟ್ಟಿರುವುದಲ್ಲದೆ ಈ ಕೇಸಿನ ಮುಂದಿನ ವಿಚಾರಣೆಯನ್ನು ಸಹ ಕೈಬಿಟ್ಟಿದೆ.
ಮೊದಲ ಪ್ರಕರಣದಲ್ಲಿ ಸಂಸದ ಡಿ ಕೆ ಸುರೇಶ್ ವಿರುದ್ಧ ಆರೋಪಪಟ್ಟಿ ಸಲ್ಲಿಸಲು 11 ವರ್ಷ 2 ತಿಂಗಳಿಗೂ ಅಧಿಕ ಕಾಲ ವಿಳಂಬವಾಗಿತ್ತು ಮತ್ತು ಎರಡನೇ ಕೇಸಿನಲ್ಲಿ ಕೂಡ ಆರೋಪಪಟ್ಟಿ ಸಲ್ಲಿಸಲು 3 ವರ್ಷ 11 ತಿಂಗಳು ವಿಳಂಬವಾಗಿದೆ ಎಂದು ಸುರೇಶ್ ಪರ ವಕೀಲರು ವಾದ ಮಂಡಿಸಿದ್ದರು.
SCROLL FOR NEXT