ರಾಜ್ಯ

ಅಧಿವೇಶನದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗಿದೆ: ಮುಕುಲ್ ರೋಹ್ಟಗಿ

Srinivasamurthy VN
ನವದೆಹಲಿ: ನಾಳಿನ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದು ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ಹೇಳಿದ್ದಾರೆ.
ಇಂದು ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ನ್ಯಾಯಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅತೃಪ್ತ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅವರು, 'ಇಂದಿನ ತೀರ್ಪು ಅತೃಪ್ತ ಶಾಸಕರಿಗೆ ನಿರಾಳತೆ ನೀಡಿದೆ. ವಿಶ್ವಾಸಮತ ಹಿನ್ನಲೆಯಲ್ಲಿ ನಡೆಯುವ ವಿಧಾನಸಭೆ ಕಲಾಪಕ್ಕೆ ಹಾಜರಾಗಲೇ ಬೇಕು ಎಂಬ ನಿಯನ ಈ ಅತೃಪ್ತಶಾಸಕರಿಗೆ ಅನ್ವಯವಾಗುವುದಿಲ್ಲ. ಕಲಾಪಕ್ಕೆ ಹಾಜರಾಗುವ ಅಥವಾ ಗೈರಾಗುವ ಸಂಪೂರ್ಣ ಹಕ್ಕು ಶಾಸಕರಿಗೆ ಇದೆ ಎಂದು  ಹೇಳಿದೆ ಎಂದು ಹೇಳಿದ್ದಾರೆ.
ಅಂತೆಯೇ ಶಾಸಕರಿಗೆ ನೀಡಲಾಗಿರುವ ವಿಪ್ ಕುರಿತು ಮಾತನಾಡಿರುವ ರೋಹ್ಟಗಿ ಅವರು, ಸುಪ್ರೀಂ ಕೋರ್ಟ್ ನ ದೃಷ್ಟಿಯಲ್ಲಿ ನೋಡುವುದಾದರೆ ದೋಸ್ತಿ ಪಕ್ಷಗಳು ಜಾರಿ ಮಾಡಿರುವ ವಿಪ್ ಅತೃಪ್ತ ಶಾಸಕರಿಗೆ ಅನ್ವಯಿಸುವುದಿಲ್ಲ. ಅಂತೆಯೇ ಶಾಸಕರ ರಾಜಿನಾಮೆ ವಿಚಾರದ ಸಂಪೂರ್ಣ ಜವಾಬ್ದಾರಿ ಸ್ಪೀಕರ್ ಮೇಲಿದ್ದು, ಅವರ ನಿರ್ಣಯವೇ ಅಂತಿಮ. ರಾಜಿನಾಮೆ ಕುರಿತ ಯಾವುದೇ ನಿರ್ಧಾರಕ್ಕೆ ಅವರು ಬದ್ಧರು ಎಂದು ರೋಹ್ಟಗಿ ಹೇಳಿದ್ದಾರೆ.
ರಾಜೀನಾಮೆ ಸ್ವೀಕರಿಸುವಲ್ಲಿ ಸ್ಪೀಕರ್ ರಮೇಶ್ ಕುಮಾರ್​ ವಿಳಂಬ ಮಾಡುತ್ತಿರುವುದನ್ನು ಪ್ರಶ್ನಿಸಿ 15 ಅತೃಪ್ತ ಶಾಸಕರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಕಳೆದ ವಾರ ಆ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿತ್ತು. ಇಂದು ಮತ್ತೊಮ್ಮೆ ಸಿಜೆಐ ರಂಜನ್​ ಗೊಗೋಯ್​ ಪೀಠದಲ್ಲಿ ಮಹತ್ವದ ವಿಚಾರಣೆ ನಡೆಸಿದೆ.
SCROLL FOR NEXT