ರಾಜ್ಯ

ಸಾಲಮನ್ನಾ ಬಡ್ಡಿ ಪಾವತಿ ದಿನಾಂಕವನ್ನು ವಿಸ್ತರಿಸಿದ ರಾಜ್ಯ ಸರ್ಕಾರ

Sumana Upadhyaya
ಬೆಂಗಳೂರು: ಆರಂಭದಲ್ಲಿ ಅಂದಾಜು ಮಾಡಿರುವುದಕ್ಕಿಂತ ರೈತರ ಸಾಲಮನ್ನಾ ವೆಚ್ಚ ಕಡಿಮೆಯಾಗುತ್ತಿದ್ದು ಇನ್ನೊಂದೆಡೆ ಬ್ಯಾಂಕುಗಳು ರೈತರ ಸಾಲ ಬಾಕಿ ಮತ್ತು ಬಡ್ಡಿಪಾವತಿ ಮರುಪಾವತಿಗೆ ವಿಸ್ತರಿಸಲು ನೋಡುತ್ತಿರುವಾಗ ಇನ್ನಷ್ಟು ರೈತರಿಗೆ ಸಾಲಮನ್ನಾ ಯೋಜನೆಯ ಫಲ ಸಿಗಲು ರಾಜ್ಯ ಸರ್ಕಾರ ಹಲವು ಕ್ರಮ ಕೈಗೊಳ್ಳುತ್ತಿದೆ.
ಇದೇ 15ರಂದು ರಾಜ್ಯಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕಳೆದ ವರ್ಷ ಜುಲೈ 10ರವರೆಗೆ ರೈತರು ತೆಗೆದುಕೊಂಡ ಸಾಲದ ಬಡ್ಡಿ ಪಾವತಿಗೆ 20 ದಿನಗಳ ಹೆಚ್ಚುವರಿ ಕಾಲಾವಕಾಶ ನೀಡಿದೆ. ಸಹಕಾರಿ ಬ್ಯಾಂಕುಗಳಲ್ಲಿ ರೈತರ ಸಾಲ  ಮತ್ತು ಬಡ್ಡಿ 1 ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಜುಲೈ 31ರೊಳಗೆ ಮರುಪಾವತಿ ಮಾಡಿದರೆ 1 ಲಕ್ಷದವರೆಗೆ ರೈತರ ಸಾಲಮನ್ನಾವಾಗಲಿದೆ.
ಈ ಸಂಬಂಧ ರೈತರಿಗೆ ಸಹಕಾರಿ ಸಂಘಗಳು ಅಧಿಸೂಚನೆ ಹೊರಡಿಸಿ ಮರುಪಾವತಿ ದಿನಾಂಕ ವಿಸ್ತರಣೆ ಮಾಡಿರುವ ಬಗ್ಗೆ ಅರಿವು ಮೂಡಿಸಬೇಕು. ಡಿಸಿಸಿ ಬ್ಯಾಂಕುಗಳಿಗೆ ಹೆಚ್ಚಿನ ಪ್ರಚಾರ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸರ್ಕಾರದ ಪತ್ರದಲ್ಲಿ ತಿಳಿಸಲಾಗಿದೆ. ಸಾಲಮನ್ನಾಗೆ ಹೆಚ್ಚಿನ ಸಂಖ್ಯೆಯಲ್ಲಿ ರೈತರನ್ನು ಅರ್ಹರನ್ನಾಗಿಸುವುದು ಇದರ ಉದ್ದೇಶವಾಗಿದೆ. 
ಸಹಕಾರಿ ವಲಯದಲ್ಲಿ ಸಾಲಮನ್ನಾ ಪಡೆಯಲು ಸರ್ಕಾರ ನಿಗದಿಪಡಿಸಿರುವ ನಿಯಮ ಪ್ರಕಾರ ಈಗಿರುವ ಸಾಲಮನ್ನಾಗೆ ಅರ್ಹತೆ ಪಡೆಯಲು ಈಗಿರುವ ಸಾಲದ ಮೇಲಿನ ಬಡ್ಡಿಯನ್ನು ಮರುಪಾವತಿ ಮಾಡಬೇಕಾಗುತ್ತದೆ. ಬಡ್ಡಿ ಮರುಪಾವತಿ ದಿನಾಂಕವನ್ನು ವಿಸ್ತರಿಸಿರುವುದರಿಂದ ಇನ್ನಷ್ಟು ರೈತರು ಸಾಲಮನ್ನಾಗೆ ಅರ್ಹರಾಗುವ ಸಾಧ್ಯತೆಯಿದೆ.
SCROLL FOR NEXT