ಬೆಂಗಳೂರು: ವಿದ್ಯಾರ್ಥಿಯೊಬ್ಬನ ಖಾತೆಯಿಂದ 81 ರು. ಕಟ್ ಮಾಡಿದ್ದಕ್ಕೆ ಬ್ಯಾಂಕಿಗೆ 6,000 ದಂಡ ವಿಧಿಸಿರುವ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ಎಂಟು ವರ್ಷದ ಬಾಲಕ ತನ್ನ ಬ್ಯಾಂಕ್ ಖಾತೆಯಿಂದ 81 ರು. ಕಡಿತ ಮಾಡಿಕೊಂಡದ್ದನ್ನು ವಿರೋಧಿಸಿ ಲಕ್ಷ್ಮಿ ವಿಲಾಸ್ ಬ್ಯಾಂಕ್ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದಾನೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಬಾಲಕನಿಗೆ 1,000 ರು. ಪರಿಹಾರ, ಹಾಗೂ 5,000 ರು. ನ್ಯಾಯಾಲಯ ವೆಚ್ಚ ಪಾವತಿಸುವಂತೆ ಬ್ಯಾಂಕ್ ಗೆ ಆದೇಶಿಸಿದೆ.
ಜಾಲಹಳ್ಳಿ ನಿವಾಸಿಯಾದ ಮಹೇಶ್ ಕುಮಾರ ಪುತ್ರ ಎಂಕೆ ಶ್ರೇಯಸ್ (8) ನೀಡಿದ್ದ ದೂರಿನನ್ವಯ ಈ ವಿಚಾರಣೆ ನಡೆದಿತ್ತು. ಲಕ್ಶ್ಮಿ ವಿಲಾಸ್ ಬ್ಯಾಂಕ್ ನ ಜಾಲಹಳ್ಳಿ ಶಾಖೆಗೆ ಬಾಲಕನಿಗೆ ಪರಿಹಾರ ಮೊತ್ತ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರು ನಗರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ವೇದಿಕೆ ಈ ನಿರ್ದೇಶನ ನಿಡಿದ್ದು ಉಳಿತಾಯ ಖಾತೆಯಲ್ಲಿ ಖಾತೆದಾರನು ಕನಿಷ್ಟ ಮೊತ್ತವನ್ನು ಉಳಿಸಿಕೊಂಡಿದ್ದರೂ ಸಹ ಬ್ಯಾಂಕ್ ಆತನಿಂದ 81 ರು. ಪಡೆದಿದ್ದರ ಕುರಿತು ನ್ಯಾಯಾಲಯ ಪ್ರಶ್ನಿಸಿದೆ.
ಬ್ಯಾಂಕು ಗ್ರಾಹಕರ ಹಣವನ್ನು ಅಕ್ರಮವಾಗಿ ಕಡಿತಗೊಳಿಸಿದೆ.ದೂರುದಾರನು ಬ್ಯಾಂಕಿನ ಸೇವಾ ಕೊರತೆಯನ್ನು ಸಾಬೀತುಪಡಿಸಿದ್ದಾನೆ. ಆದ್ದರಿಂದ, ದೂರುದಾರರ ಖಾತೆಯಿಂದ ಕಡಿತಗೊಳಿಸಲಾದ 81 ರೂ.ಗಳ ಮೊತ್ತವನ್ನು 1,000 ರೂ.ಗಳ ಪರಿಹಾರದೊಂದಿಗೆ ಹಿಂತಿರುಗಿಸಲು ಬ್ಯಾಂಕ್‌ಗೆ ನಿರ್ದೇಶಿಸಲಾಗಿದೆ.
ಸೇಂಟ್ ಕ್ಲಾರೆಟ್ಸ್ ಶಾಲೆಯಲ್ಲಿ ಓದುತ್ತಿರುವ ಶ್ರೇಯಸ್ ವಿದ್ಯಾರ್ಥಿವೇತನಕ್ಕಾಗಿ ಲಕ್ಷ್ಮಿ ವಿಲಾಸ್ ಬ್ಯಾಂಕಿನಲ್ಲಿ ಖಾತೆ ತೆರೆಯುವಂತೆ ಕೇಳಲಾಯಿತು. ಜಂಟಿ ಉಳಿತಾಯ ಬ್ಯಾಂಕ್ ಖಾತೆಯನ್ನು ಶ್ರೇಯಸ್ ಹಾಗೂ ಆತನ ತಂದೆ ತೆರೆದಿದ್ದಾರೆ. ಅಲ್ಲದೆ ಸೆಪ್ಟೆಂಬರ್ 22, 2016ರಂದು 1,000 ರು. ಜಮಾ ಮಾಡಲಾಗಿದೆ.ಇದು ಖಾತೆದಾರರಿಂದ ನಿರ್ವಹಿಸಲ್ಪಡಬೇಕಾಗಿರುವ ಕನಿಷ್ಟ ಮೊತ್ತವಾಗಿದೆ. ಏಪ್ರಿಲ್ 1, 2017 ರಂದು, ಶ್ರೇಯಸ್ ಗೆ ತಿಳಿಸದೆ ಬ್ಯಾಂಕ್ ಅವನ ಖಾತೆಯಿಂದ 114 ರೂಗಳನ್ನು ಕಡಿತಗೊಳಿಸಿ, ಕನಿಷ್ಠ ಬಾಕಿ ಉಳಿಸಿಕೊಂಡಿಲ್ಲ ಎಂದು ಹೇಳಿದರು. ಮತ್ತೆ ಜುಲೈ 2, 2017 ರಂದು 371 ರೂ.ಗಳ ದಂಡವನ್ನು ಕನಿಷ್ಠ ಮೊತ್ತ ಉಳಿಸಿಕೊಂಡಿಲ್ಲದ್ದಕ್ಕೆ ಕಡಿತ ಮಾಡಿಕೊಳ್ಳಲಾಗಿದೆ.
ಶ್ರೇಯಸ್ ಬ್ಯಾಂಕ್‌ಗೆ ಭೇಟಿ ನೀಡಿದಾಗ, ಕನಿಷ್ಠ ಬಾಕಿ 1,000 ರೂ.ನಿಂದ 3,000 ರೂ.ಗೆ ಏರಿದೆ ಎಂದು ವ್ಯವಸ್ಥಾಪಕರು ತಿಳಿಸಿದರು, ಮತ್ತು ಎಲ್ಲಾ ಗ್ರಾಹಕರಿಗೆ ಎಸ್‌ಎಂಎಸ್ ಮೂಲಕ ಈ ಮಾಹಿತಿ ರವಾನಿಸಲಾಗಿದೆ ಎಂದಿದ್ದಾರೆ. ಆದರೆ ಪ್ರತಿ ತಿಂಗಳು ಬ್ಯಾಂಕ್ ಎಸ್‌ಎಂಎಸ್ ಶುಲ್ಕವನ್ನು ಕಡಿತಗೊಳಿಸಿದ್ದರೂ ದೂರುದಾರರಿಗೆ ಇದರ ಬಗ್ಗೆ ಒಂದೇ ಒಂದು ಎಸ್‌ಎಂಎಸ್ ಬಂದಿಲ್ಲ. ಸಮಸ್ಯೆಯನ್ನು ಬಗೆಹರಿಸಲು ಬ್ಯಾಂಕ್ ವ್ಯವಸ್ಥಾಪಕ ವಿಫಲವಾಗಿದ್ದಾರೆ. ಇದರಿಂದ ಶ್ರೇಯಸ್ ನ್ಯಾಯಾಲಯಕ್ಕೆ ತೆರಳಿದ್ದಾರೆ. ಜುಲೈ 2017 ರಂದು ನೋಟಿಸ್ ನೀಡಿದ ನಂತರ, ಬ್ಯಾಂಕ್ ಕಡಿತಗೊಳಿಸಿದ ದಂಡವನ್ನು ಹಿಂತಿರುಗಿಸಿತು
ಅದರ ನಂತರ, ಕನಿಷ್ಠ ಬಾಕಿ ಮೊತ್ತದ ದಂಡವನ್ನು ತಪ್ಪಿಸಲು ದೂರುದಾರನು ಆಗಸ್ಟ್ 1, 2017 ರಂದು 2,000 ರೂ ಮತ್ತು 2017 ರ ಸೆಪ್ಟೆಂಬರ್ 29 ರಂದು 3,000 ರೂ. ಜಮೆ ಮಾಡಿದ್ದಾರೆ. ಆದರೂ ಬ್ಯಾಂಕ್ ಮತ್ತೊಮ್ಮೆ ಅಕ್ಟೋಬರ್ 1 ರಂದು 79 ರೂಗಳನ್ನು ಮತ್ತು ಅಕ್ಟೋಬರ್ 4, 2017 ರಂದು 2 ರೂಗಳನ್ನು ಕನಿಷ್ಠ ಮೊತ್ತದ ದಂಡ ಎಂದು ಕಡಿತ ಮಾಡಿದೆ.ದ್ದರಿಂದ, ದೂರುದಾರನು ನಿರ್ಲಕ್ಷ್ಯದ ಆರೋಪದ ಮೇಲೆ ಬ್ಯಾಂಕ್ ವಿರುದ್ಧ ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos