ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಗ್ರಾಮಗಳ ಮಕ್ಕಳು ಶಾಲೆಗೆ ಹೋಗುತ್ತಿರುವುದು 
ರಾಜ್ಯ

ಖಾನಾಪುರ ತಾಲ್ಲೂಕಿನ ಈ ಮಕ್ಕಳು ಶಾಲೆಗೆ ಹೋಗಿಬರಲು ಪ್ರತಿನಿತ್ಯ 24 ಕಿ.ಮೀ. ನಡೆಯಬೇಕು!

ಜಿಲ್ಲೆಯ ಖಾನಾಪುರ ಅರಣ್ಯ ಪ್ರದೇಶದ ಚಪೋಳಿ, ಕಪೋಳಿ, ಮುದ್ಗೈ ಮೊದಲಾದ ಗ್ರಾಮಗಳ ಮಕ್ಕಳು...

ಬೆಳಗಾವಿ: ಜಿಲ್ಲೆಯ ಖಾನಾಪುರ ಅರಣ್ಯ ಪ್ರದೇಶದ ಚಪೋಳಿ, ಕಪೋಳಿ, ಮುದ್ಗೈ ಮೊದಲಾದ ಗ್ರಾಮಗಳ ಮಕ್ಕಳು ಪ್ರತಿನಿತ್ಯ ಶಾಲೆಗೆ ಹೋಗುವುದು ಒಂದು ಹರಸಾಹಸದ ಕೆಲಸ. 
ಜಂಬೋಟಿಯಲ್ಲಿರುವ ಶಾಲೆಗೆ ಹೋಗಲು ಬಸ್ಸಿನ ಸೌಕರ್ಯವಿಲ್ಲ.ಮಕ್ಕಳು ಬೇರೆ ದಾರಿಯಿಲ್ಲದೆ ಪ್ರತಿದಿನ 24 ಕಿಲೋ ಮೀಟರ್ ನಡೆದುಕೊಂಡು ಶಾಲೆಗೆ ಹೋಗಿಬರಬೇಕು.
ಮಳೆಗಾಲದಲ್ಲಿ ಹಾದಿಗಳು ಮಣ್ಣಿನಿಂದ ಕೊಚ್ಚೆಯಾಗಿ ನಡೆಯಲು ಕೂಡ ಕಷ್ಟವಾಗುತ್ತದೆ. ಹಲವು ಸಂದರ್ಭಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವ ವಾಹನದಲ್ಲಿ ಮಕ್ಕಳನ್ನು ಶಾಲೆಗೆ ಬಿಡುವುದು ಕೂಡ ಉಂಟು.
ಖಾನಾಪುರ ಅರಣ್ಯ ಪ್ರದೇಶ ಹಲವು ಕ್ರಿಮಿ ಕೀಟಗಳು, ಪ್ರಾಣಿ ಪಕ್ಷಿಗಳ ನೆಲೆಯಾಗಿದೆ. ಇಲ್ಲಿ  ಮಾನವ-ಪ್ರಾಣಿ ಸಂಘರ್ಷ ನಡೆಯುತ್ತಲೇ ಇದೆ. ಗ್ರಾಮಸ್ಥರ ಮೇಲೆ ಈ ಹಿಂದೆ ಚಿರತೆ, ಕರಡಿ ಮತ್ತು ಇತರ ವನ್ಯಜೀವಿಗಳು ದಾಳಿ ನಡೆಸಿದ ಉದಾಹರಣೆಗಳಿವೆ. ಚಪೊಲಿ, ಕಪೊಲಿ, ಮುದ್ಗೈ, ವರಕಾಡ್-ಪತ್ಯೆ ಮತ್ತು ಅಮ್ಗೌನ್ ಗ್ರಾಮಗಳ ನಿವಾಸಿಗಳು ತಮಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್, ಮಕ್ಕಳಿಗೆ ಸರಿಯಾದ ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ಹಲವು ವರ್ಷಗಳಿಂದ ಬೇಡಿಕೆಯೊಡ್ಡುತ್ತಲೇ ಬಂದಿದ್ದಾರೆ. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಚಪೊಲಿ ನಿವಾಸಿ ವೆಂಕಟ್ ಪಾಟೀಲ್, ತಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಇತ್ತೀಚೆಗೆ ನಾವು ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಿದ್ದೆವು. ಆದರೆ ಯಾವುದೇ ಪ್ರಯೋಜನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಭಾರೀ ಮಳೆ ಬಂದಾಗ ಚಪೊಲಿಗೆ ಹೋಗುವ ಮಾರ್ಗ ತೀರಾ ಕೆಟ್ಟು ಹೋಗುತ್ತದೆ. ರಸ್ತೆ ಸರಿಯಾಗಿಲ್ಲದಿರುವುದರಿಂದ ಕೆಎಸ್ ಆರ್ ಟಿಸಿ ಬಸ್ಸು ಈ ಸಮಯಗಳಲ್ಲಿ ನಮ್ಮ ಗ್ರಾಮಕ್ಕೆ ಬರುವುದೇ ಇಲ್ಲ ಎನ್ನುತ್ತಾರೆ.
ಚಪೊಲಿಯಲ್ಲಿ 1ರಿಂದ 5ನೇ ತರಗತಿಯವರೆಗೆ ಶಿಕ್ಷಣವಿರುವ ಕಿರಿಯ ಪ್ರಾಥಮಿಕ ಶಾಲೆಯಿದೆ. 6ರಿಂದ 10ನೇ ತರಗತಿಯವರೆಗೆ ಹೋಗಬೇಕೆಂದರೆ ಮಕ್ಕಳು ಜಂಬೊಟಿಗೆ 12 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕು. 
ಹೈಕೋರ್ಟ್ 2014ರ ಡಿಸೆಂಬರ್ 24ರಂದು ಖಾನಾಪುರ ಅರಣ್ಯ ಪ್ರದೇಶದ 20 ಗ್ರಾಮಗಳ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು.ಅದಿನ್ನೂ ಸರ್ಕಾರ ಈಡೇರಿಸಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!