ಏರ್ಯ ಲಕ್ಷ್ಮೀನಾರಾಯಣ ಆಳ್ವ 
ರಾಜ್ಯ

ಹಿರಿಯ ಸಾಹಿತಿ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ ವಿಧಿವಶ

ಶ್ರೇಷ್ಠ ಸಾಹಿತಿ, ಜಾನಪದ ತಜ್ಞ, ಧಾರ್ಮಿಕ, ಸಾಮಾಜಿಕ ಧುರೀಣ, ಸಹಕಾರಿ ರಂಗದ ನೇತಾರ, ಅಸಾಮಾನ್ಯ ಸಂಘಟಕ, ನಿತ್ಯ ಕಾರ್ಯಶೀಲ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ (94)....

ಬಂಟ್ವಾಳ: ಶ್ರೇಷ್ಠ ಸಾಹಿತಿ, ಜಾನಪದ ತಜ್ಞ, ಧಾರ್ಮಿಕ, ಸಾಮಾಜಿಕ ಧುರೀಣ, ಸಹಕಾರಿ ರಂಗದ ನೇತಾರ, ಅಸಾಮಾನ್ಯ ಸಂಘಟಕ, ನಿತ್ಯ ಕಾರ್ಯಶೀಲ ಡಾ. ಏರ್ಯ ಲಕ್ಷ್ಮೀನಾರಾಯಣ ಆಳ್ವ (94) ಶನಿವಾರ ಬಂಟ್ವಾಳ ಮೊಡಂಕಾಪುವಿನ ಸಾಕೇತ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.
ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಆಳ್ವರು ಪತ್ನಿ, ಪುತ್ರಿ ಮತ್ತು ಮೂವರು ಸೋದರಿಯರು ಹಾಗೂ ಅಸಂಖ್ಯಾತ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.
1926ರ ಮಾರ್ಚ್‌ ತಿಂಗಳಲ್ಲಿ ಜನಿಸಿದ ಏರ್ಯ ಅವರು ಹೈಸ್ಕೂಲ್‌ ಶಿಕ್ಷಣ ಮುಗಿಸುವ ಮೊದಲೇ ಗಾಂಧೀಜಿ ಮತ್ತು ಕಾರ್ನಾಡು ಸದಾಶಿವ ರಾವ್‌ ಅವರಿಂದ ಪ್ರೇರಿತರಾಗಿ ರಾಷ್ಟ್ರಸೇವಾ ರಂಗಕ್ಕೆ ಧುಮುಕಿದರು. ಇನ್ನೂ ಎಳೆಯ ಪ್ರಾಯದಲ್ಲೆ ಹರಿಜನರ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು ಹಾಗೂ ಅವರಿಗೆ ಸಮಾಜದಲ್ಲಿ ಸ್ಥಾನಮಾನ ದೊರಕಿಸಿಕೊಡುವಲ್ಲಿ ಹೋರಾಡಿದ್ದರು. ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರಿಂದ ಪ್ರಭಾವಿತರಾದ ಆಳ್ವರು ಆ ಕ್ಷೇತ್ರದಲ್ಲೂ ಅಸಾಮಾನ್ಯವಾದ ಕಾರ್ಯ ನಿರ್ವಹಿಸಿದ್ದಾರೆ. ಅವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿಯೂ ಕ್ಷಮತೆಯಿಂದ ಕಾರ್ಯ ನಿರ್ವಹಿಸಿದ್ದಾರೆ.
 ವಿಶ್ವ ಹಿಂದೂ ಪರಿಷತ್‌ನ ಕರ್ನಾಟಕ ಘಟಕದ ಅಧ್ಯಕ್ಷರಾಗಿದ್ದ ಇವರು ಅಖೀಲ ಕರ್ನಾಟಕ ಜಾನಪದ ಪರಿಷತ್‌ನ ವಿಶ್ವಸ್ತರಾಗಿಯೂ ಸೇವೆ ಸಲ್ಲಿಸಿದ್ದರು.ಹಲವು ಕ್ಷೇತ್ರಗಳಲ್ಲಿ ಇವರು ಸಲ್ಲಿಸಿದ್ದ ಸೇವೆಯನ್ನು ಪರಿಗಣಿಸಿ ಲ್ಲೆ. ರಾಜ್ಯದ ಅನೇಕ ಸಂಸ್ಥೆಗಳು ಅವರನ್ನು ಸಮ್ಮಾನಿಸಿವೆ. ಕೆಲವು ವರ್ಷಗಳ ಹಿಂದೆ ಅವರ ಅಭಿಮಾನಿಗಳು ಸೇರಿ “ಏರ್ಯ’ ಎಂಬ ಅಭಿನಂದನ ಗ್ರಂಥವನ್ನೂ ಸಮರ್ಪಣೆ ಮಾಡಿದ್ದರು.
1969ರ ಜನವರಿಯಲ್ಲಿ ಏರ್ಯ ಲಕ್ಷ್ಮೀನಾರಾಯಣ ಅವರು 2ನೇ ಅಖೀಲ ಕರ್ನಾಟಕ ಜಾನಪದ ಸಮ್ಮೇಳನದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಾಕಷ್ಟು ಮಂದಿಗೆ ಮೆಚ್ಚುಗೆಯಾಗಿದ್ದರು.
ಸಾಹಿತ್ಯ ಕ್ಷೇತ್ರದಲ್ಲಿ ಕೃಷಿ ಮಾಡಿದ್ದ ಆಳ್ವ ಅವರು ಬರೆದ ರಾಮಾಶ್ವಮೇಧ ತರಂಗಗಳು 1959ರಲ್ಲಿ ಪ್ರಕಟವಾಗಿದ್ದು ಈ ಕೃತಿ ಅಂದಿನ ಮೈಸೂರು ಹಾಗೂ ಮದ್ರಾಸ್‌ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕವಾಗಿ ಆಯ್ಕ್ರ್ಯಾಗಿತ್ತು.ಸ್ನೇಹಸೇತು-ಪತ್ರರೂಪದ ಕಾದಂಬರಿ; ಜೀವನ ಚಿತ್ರ-ಮುಳಿಯ ತಿಮ್ಮಪ್ಪಯ್ಯನವರ ಕುರಿತು; ಕೃತಿ ವಿಮರ್ಶೆ-ನಾಗೇಗೌಡರ ಸ್ವಾಗತ ಗೀತೆ. ಇತರ-ಮೊದಲ ಮಳೆ, ಸಂಚಯ, ಓರಗೆಗೆ ಒಲವಿನ ಒಸಗೆ ಮುಂತಾದವು. ತುಳುನಾಡಿನ ಭೂತಾರಾಧನೆಯ ಕುರಿತಾದ ಸಮಗ್ರ ಅಧ್ಯಯನ ಗ್ರಂಥ ಮಂಗಳ ತಿಮರು'. ಕೌಟುಂಬಿಕ ಪರಿಚಯದ ನೂರರ ನೆನಪು.' ಸಂಪಾದಿತ ಗ್ರಂಥ-ಗಾನ ಕೋಗಿಲೆ' ಯಕ್ಷ ಗಾನ ಭಾಗವತ ದಾಮೋದರ ಮಂಡೆಚ್ಚರ ಸಂಸ್ಮರಣ ಗ್ರಂಥ ಇವು ಆಳ್ವ ಅವರ ಪ್ರಮುಖ ಕೃತಿಗಳಾಗಿದೆ.
ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷ, ಕಾಸರಗೋಡು ಸಾಹಿತ್ಯ ಸಮ್ಮೇಳನಾಧ್ಯಕ್ಷ ತೆ, ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ,ಮಂಗಳೂರು ವಿವಿ ಗೌರವ ಡಾಕ್ಟರೇಟ್‌, ಬಂಟರ ಸಂಘದ ಅಮೃತ ಮಹೋತ್ಸವ, ತುಳು ಸಾಹಿತ್ಯ ಅಕಾಡೆಮಿ ಗೌರವ, ಸಾಹಿತ್ಯ ಸಮ್ಮೇಳನ, ಕೆನರಾ ಜೂನಿಯರ್‌ ಕಾಲೇಜು ಬೆಳ್ಳಿಹಬ್ಬ, ಬಂಟರ ಸಂಘದ ಅಮೃತ ಮಹೋತ್ಸವ, ತುಳು ಸಾಹಿತ್ಯ ಅಕಾಡೆಮಿಗೌರವ ಸೇರಿ ಅನೇಕ ಪ್ರಶಸ್ತಿ, ಗೌರವಗಳಿಗೆ ಆಳ್ವ ಪಾತ್ರರಾಗಿದ್ದರು.
ಗಣ್ಯರ ಸಂತಾಪ
ಸಾಹಿತಿ . ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌, ಮಾಜಿ ಸಚಿವ ಬಿ. ರಮಾನಾಥ ರೈ, ಫರಂಗಿಪೇಟೆ ಸೇವಾಂಜಲಿಯ ಟ್ರಸ್ಟಿ ಕೃಷ್ಣಕುಮಾರ ಪೂಂಜ ಸೇರಿದಂತೆ ಹಲವಾರು ಗಣ್ಯರು, ನಾಯಕ್ರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT