ಚಿಕ್ಕಮಗಳೂರಿಗೆ ತೆರಳಿದ ಎಸ್.ಎಂ ಕೃಷ್ಣ ದಂಪತಿ 
ರಾಜ್ಯ

ಸಂಜೆ ಸಿದ್ದಾರ್ಥ್ ಅಂತ್ಯಕ್ರಿಯೆ: ಚಿಕ್ಕಮಗಳೂರಿಗೆ ತೆರಳಿದ ಎಸ್ಎಂ ಕೃಷ್ಣ ದಂಪತಿ

ನೇತ್ರಾವತಿ ನದಿಯಲ್ಲಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡ ಹಿರಿಯ ಉದ್ಯಮಿ ವಿ ಜಿ ಸಿದ್ದಾರ್ಥ್ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವರ ಮಾವ...

ಬೆಂಗಳೂರು: ನೇತ್ರಾವತಿ ನದಿಯಲ್ಲಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡ ಹಿರಿಯ ಉದ್ಯಮಿ ವಿ ಜಿ ಸಿದ್ದಾರ್ಥ್ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವರ ಮಾವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಇಂದು ಅಪರಾಹ್ನ ಚಿಕ್ಕಮಗಳೂರಿಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದರು.
ಬೆಂಗಳೂರಿನ ಎಚ್.ಎ.ಎಲ್. ವಿಮಾನ ನಿಲ್ದಾಣದಿಂದ ಪತ್ನಿ ಪ್ರೇಮಾ ಕೃಷ್ಣ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ತೆರಳಿದರು.
ಸಿದ್ಧಾರ್ಥ್ ಅವರ ನಾಪತ್ತೆಯಾದ ಬಳಿಕ ತೀವ್ರ ನೋಂದಿರುವ ಎಸ್ ಎಂ ಕೃಷ್ಣ, ನಿನ್ನೆ ರಾತ್ರಿ ತೀವ್ರ ಜ್ವರದಿಂದ ಬಳಲಿದರು ಎನ್ನಲಾಗಿದೆ. ಅವರ ಕುಟುಂಬ ವೈದ್ಯರು ಕೃಷ್ಣ ಅವರನ್ನು ಪರೀಕ್ಷಿಸಿ, ಸೂಕ್ತ ರೀತಿಯಲ್ಲಿ ಆಹಾರ ಮತ್ತು ಔಷಧಿ ಸೇವಿಸುವಂತೆ ಸಲಹೆ ಮಾಡಿದರು ಎನ್ನಲಾಗಿದೆ.
ಕೃಷ್ಣ ಅವರು ಶುಕ್ರವಾರ ರಾತ್ರಿಯಿಂದ ಸಮರ್ಪಕವಾಗಿ ಆಹಾರ ಸೇವಿಸದೇ ರೋಧಿಸುತ್ತಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಹೇಳಿವೆ. ಇಂದು ಸಂಜೆ ಚಿಕ್ಕಮಗಳೂರಿನಲ್ಲಿ ಸಿದ್ಧಾರ್ಥ್ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ನೆರವೇರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನನಗೆ ಯಾರೂ ಹೂವಿನ ಹಾರ ಹಾಕ್ಬೇಡಿ: ನಿಯೋಜಿತ ಸಿಎಂ ಡಿಕೆಶಿ ಹೀಗೆ ಹೇಳಿದ್ಯಾಕೆ ಗೊತ್ತಾ?

IPL ಫೈನಲ್‌: ಆರ್​​ಸಿಬಿಗೊಂದು ನ್ಯಾಯ, ಗುಜರಾತ್​ಗೊಂದು ನ್ಯಾಯ; ಅಂಪೈರ್ ಔಟ್ ಕೊಟ್ಟಿದ್ದಕ್ಕೆ ಕೆರಳಿದ ಕೊಹ್ಲಿ, ಅನುಷ್ಕಾ, Video!

ಸಂಪುಟ ರಚನೆ ಕಸರತ್ತು: ನಿಯೋಜಿತ ಸಿಎಂ ಡಿಕೆ ಶಿವಕುಮಾರ್, ಹಂಗಾಮಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ

IPL 2026 Final: RCB ತಂಡಕ್ಕೆ 156 ರನ್ ಗುರಿ ನೀಡಿದ Gujarat Titans

ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಬೆನ್ನಲ್ಲೇ ಪಕ್ಷದ ಸಭೆಗೆ 80 TMC ಶಾಸಕರು ಗೈರು!

SCROLL FOR NEXT