ಸಂಗ್ರಹ ಚಿತ್ರ 
ರಾಜ್ಯ

ಮೈಸೂರು: ಅಣ್ಣ ಅಂತ ಹೇಳಿಕೊಂಡು ಪ್ರಿಯಕರನ ಜೊತೆ ಪಲ್ಲಂಗದಾಟ, ಕೊನೆಗೆ ಗಂಡ ಕಥೆ ಮುಗಿಸಿದ ಪತ್ನಿ!

ತನ್ನ ಲವರ್ ನನ್ನೇ ಅಣ್ಣ ಅಂತ ಗಂಡನಿಗೆ ಪರಿಚಯ ಮಾಡಿದ್ದ ಪತ್ನಿ ಗಂಡ ಕೆಲಸಕ್ಕೆ ಹೋದ ನಂತರ ಲವರ್ ಜೊತೆ ಕಾಲ ಕಳೆಯುತ್ತಿದ್ದಳು. ಕೊನೆಗೆ ತಮ್ಮ ಸಂಬಂಧಕ್ಕೆ....

ಮೈಸೂರು: ತನ್ನ ಲವರ್ ನನ್ನೇ ಅಣ್ಣ ಅಂತ ಗಂಡನಿಗೆ ಪರಿಚಯ ಮಾಡಿದ್ದ ಪತ್ನಿ ಗಂಡ ಕೆಲಸಕ್ಕೆ ಹೋದ ನಂತರ ಲವರ್ ಜೊತೆ ಕಾಲ ಕಳೆಯುತ್ತಿದ್ದಳು. ಕೊನೆಗೆ ತಮ್ಮ ಸಂಬಂಧಕ್ಕೆ ಎಲ್ಲಿ ಗಂಡನಿಗೆ ತಿಳಿದುಬಿಡುತ್ತದೆ ಎಂದು ಹೆದರಿ ಆತನ ಕಥೆಯನ್ನೇ ಮುಗಿಸಿ ಬಿಟ್ಟಿದ್ದಾಳೆ.
ಇನ್ಫೋಸಿಸ್ ನಲ್ಲಿ ಕೆಲಸ ಮಾಡುತ್ತಿದ್ದ ಶಿವಕುಮಾರ್ ಎಂಬಾತನ ಕೊಲೆ ಸಂಬಂಧ ಆತನ ಪತ್ನಿ ಮೈಸೂರಿನ ಗುಂಗ್ರಾಲ್ ಛತ್ರದ 22 ವರ್ಷದ ದಿವ್ಯಾ ಹಾಗೂ ಶ್ರೀರಂಗಪಟ್ಟಣದ ಬನ್ನಂಗಾಡಿ 28 ವರ್ಷದ ಬನ್ನಂಗಾಡಿ ಚೇತನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ದಿವ್ಯಾ ಶಿವಕುಮಾರ್ ವಿವಾಹವಾಗಿತ್ತು. ಆ ಹೊತ್ತಿಗೆ ಚೇತನ್ ನಿಂದ ದಿವ್ಯಾ ದೂರವಾಗಿದ್ದಳು. ಇನ್ನು ಗಂಡ ಪ್ರೀತಿಯಿಂದ ಹೆಂಡತಿಗೆ ಮೊಬೈಲ್ ಫೋನ್ ಕೊಡಿಸಿದ್ದ. ನಂತರ ದಿವ್ಯಾ ಫೇಸ್ ಬುಕ್ ನಲ್ಲಿ ಹಳೆಯ ಪ್ರೇಮಿಯನ್ನು ಸಂಪರ್ಕ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಾಳೆ. ಮನೆಗೆ ಬಂದ ಚೇತನ್ ನನ್ನು ನನ್ನ ಅಣ್ಣ ಎಂದು ಗಂಡನಿಗೆ ಪರಿಚಯ ಮಾಡಿಸಿದ್ದಾಳೆ. 
ಶಿವಕುಮಾರ್ ಕೆಲಸಕ್ಕೆ ಹೋದ ನಂತರ ಮನೆಗೆ ಬರುತ್ತಿದ್ದ ಚೇತನ್ ದಿವ್ಯಾ ಜೊತೆ ಸಮಯ ಕಳೆಯುತ್ತಿದ್ದ. ಈ ವಿಚಾರ ತನ್ನ ಗಂಡಿಗೆ ಎಲ್ಲಿ ಗೊತ್ತಾಗಿ ಬಿಡುತ್ತದೆ ಎಂದು ಭಾವಿಸಿ ಮಾರ್ಚ್ 29ರಂದು ಅಣ್ಣ ಚೇತನ್ ಜೊತೆ ಮದುವೆಗೆ ಹೋಗಿ ಅಂತ ಗಂಡನನ್ನು ಕಳುಹಿಸಿದ್ದಾಳೆ. ಮಾರ್ಗಮಧ್ಯೆ ಚೇತನ್ ರೌಡಿಶೀಟರ್ ಭರತ್, ಕೃಷ್ಣ ಜೊತೆ ಸೇರಿ ಶಿವಕುಮಾರ್ ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ನಂತರ ಅಪಘಾತವೆಂದು ಪ್ರಕರಣ ದಾಖಲಿಸಿದ್ದರು. 
ದಿವ್ಯಾಳ ನಡುವಳಿಕೆ ಮೇಲೆ ಅನುಮಾನವಿದ್ದರಿಂದ ಶಿವಕುಮಾರ್ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ದಿವ್ಯಾಳನ್ನು ಕರೆದು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಈ ಸಂಬಂಧ ಪೊಲೀಸರು ಚೇತನ್ ಮತ್ತು ಇನ್ನಿಬ್ಬರನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ

Sting operation ಮೂಲಕ ನಿಮ್ಮನ್ನು ಸಿಲುಕಿಸಲು ಯತ್ನಿಸಿರುವುದು ನಿಜವೇ ಆಗಿದ್ದರೆ ತನಿಖೆಗೆ ಆದೇಶಿಸಿ: ಸಿಎಂ ಡಿಕೆ.ಶಿವಕುಮಾರ್'ಗೆ HDK ಸವಾಲು

ಮತ ಕಳ್ಳತನದಿಂದಲೇ ಮೋದಿ ಪ್ರಧಾನಿಯಾಗಿದ್ದು, ಗೆಲ್ಲಲಾಗದ ರಾಜ್ಯಗಳಲ್ಲೂ BJP ಗೆಲುವು: ಅಭಿಜೀತ್ ದೀಪ್ಕೆ

ರಾಜ್ಯದ ಬಾಕಿ ಹಣದ ಬಗ್ಗೆ ನಿರ್ಮಲಾ ಸೀತಾರಾಮನ್ ಜೊತೆ ಚರ್ಚೆ: GST ಮಂಡಳಿ ಸಭೆ ಬಳಿಕ CM ಡಿಕೆ.ಶಿವಕುಮಾರ್ ಹರ್ಷ

ಉತ್ತರ ಭಾರತ ವ್ಯಕ್ತಿಯಿಂದ ಡಿಕೆಶಿ ಸಿಲುಕಿಸಲು ಯತ್ನ: ಸಚಿವ ಸತೀಶ್ ಜಾರಕಿಹೊಳಿ