ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಕುಡಿದ ಮತ್ತಿನಲ್ಲಿ ಯುವತಿಯರ ರಂಪಾಟ; ಆಟೋ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ

ಕುಡಿದ ಮತ್ತಿನಲ್ಲಿ ಮೂವರು ಯುವತಿಯರು ಆಟೋ ಚಾಲಕನನ್ನು ನಿಂದಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು: ಕುಡಿದ ಮತ್ತಿನಲ್ಲಿ ಮೂವರು ಯುವತಿಯರು ಆಟೋ ಚಾಲಕನನ್ನು ನಿಂದಿಸಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಾಗದೇವನಹಳ್ಳಿ ನಿವಾಸಿ ಸುರೇಂದ್ರ ಬಾಬು ಎಂಜಿ ರಸ್ತೆಯಿಂದ ಯುವತಿಯರನ್ನು ಆಟೋಗೆ ಹತ್ತಿಸಿಕೊಂಡಿದ್ದಾರೆ, ವಿಜಯನಗರದ ಸಮೀಪದ ಹೊಸಹಳ್ಳಿಯಲ್ಲಿ ಅವರನ್ನು ಡ್ರಾಪ್ ಮಾಡಬೇಕಿತ್ತು. ನಿಲ್ಲಲು ಸಾಧ್ಯವಾಗದೇ ತೂರಾಡುವ ಸ್ಥಿತಿಯಲ್ಲಿದ್ದ ಅವರು ಜೋರಾಗಿ ಕೂಗಾಡುತ್ತಿದ್ದರು. ಹಾಗೂ ಆಟೋ ಚಾಲಕನನ್ನು ಸುಮ್ಮನಿರುವಂತೆ ಗದರುತ್ತಿದ್ದರು.
ಕೂಗಾಡಿ ಕಿರಿಕಿರಿ ಮಾಡುತ್ತಿದ್ದ ಯುವತಿಯರು ನನ್ನನ್ನು ಬಾಯಿಗೆ ಬಂದಂತೆ ನಿಂದಿಸುತ್ತಿದ್ದರು, ಇಳಿಯುವಾಗ ಶೂ ನಿಂದ ನನಗೆ ಹೊಡೆದರು, ಈ ವೇಳೆ ಅಕ್ಕಪಕ್ಕದಲ್ಲಿದ್ದ ಜನರು ಅವರನ್ನು ಹಿಡಿಯಲು ಪ್ರಯತ್ನಿಸಿದರು, ಆದರೆ ಅಲ್ಲಿಂದ ಮೂವರು ಓಡಿಹೋದರು ಎಂದು ಬಾಬು ದೂರಿನಲ್ಲಿ ಉಲ್ಲೇಖಿಸಿದ್ದಾರೆ,  ಅಪರಿಚಿತ ಯುವತಿಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ಯುವತಿಯರಿಗಾಗಿ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ಬಂಗಾಳದಲ್ಲಿ CAA, UCC ತ್ವರಿತ ಅನುಷ್ಠಾನ; ಮಾತುವಾ, ನಮಸುದ್ರರಿಗೆ ಪೌರತ್ವ ನೀಡುತ್ತೇವೆ: ಪ್ರಧಾನಿ ಮೋದಿ

ಚಲಿಸುತ್ತಿದ್ದ ಐಶಾರಾಮಿ ಕಾರಿನಲ್ಲೇ 'ದಮ್ ಮಾರೋ ದಮ್'; ಸಿಗರೇಟ್ ರಸ್ತೆಗೆಸೆದ Yuzvendra Chahal? Video Viral

ಹಾರ್ಮುಜ್ ತೆರೆಯಲು ಇರಾನ್ ಪರದಾಟ: ಜಲಸಂಧಿ ನಿರ್ಬಂಧಿಸಲು ತಾನೇ ನೆಟ್ಟ ಮೈನ್ಸ್ ಹುಡುಕಲು ವಿಫಲ; ಹಾಗಾದ್ರೆ ಮುಂದೇನು?

ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕ್‌ನ ಐದು ಎಫ್-16 ಎಸ್ಕಾರ್ಟ್; Video ನೋಡಿ

SCROLL FOR NEXT