ರಾಜ್ಯ

ಸಿಎಂ ಗ್ರಾಮ ವಾಸ್ತವ್ಯ ಯಾವ ತಾಲ್ಲೂಕಿನಲ್ಲಿ? ರಾಯಚೂರು ಜಿಲ್ಲಾ ಜೆಡಿಎಸ್ ನಾಯಕರಿಂದ ಅಂತಿಮ ನಿರ್ಧಾರ

Sumana Upadhyaya
ಸಿಂಧನೂರು(ರಾಯಚೂರು): ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ನಡೆಸುತ್ತಿರುವ ಗ್ರಾಮ ವಾಸ್ತವ್ಯದಲ್ಲಿ ಯಾವ ಯಾವ ಗ್ರಾಮಗಳು ಎಂದು ಅಂತಿಮವಾಗದಿದ್ದರೂ ಸಹ ರಾಯಚೂರಿನಲ್ಲಿ ಸಿಂಧನೂರು ತಾಲ್ಲೂಕಿನ ದುಗ್ಗಮ್ಮನ ಗುಂಡವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ಸಿಂಧನೂರಿನ ಜೆಡಿಎಸ್ ಜಿಲ್ಲಾ ಯುವ ಘಟಕದ ನಾಯಕ ಸುಮಿತ್ ತಡ್ಕಲ್, ದುಗ್ಗಮ್ಮ ಗುಂಡವನ್ನು ಸಿಎಂ ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳಲು ಪಕ್ಷದ ಮುಖಂಡರು ತೀರ್ಮಾನಿಸಿದ್ದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಇದೊಂದು ದ್ವೀಪದಂತಹ ಗ್ರಾಮವಾಗಿದೆ. ಮಳೆ ಜೋರಾಗಿ ಬಂದರೆ ಗ್ರಾಮ ನೀರಿನಿಂದ ಆವೃತವಾಗುತ್ತದೆ. ಬೇರೆ ಗ್ರಾಮಗಳ ಜೊತೆ ಸಂಪರ್ಕ ಕಳೆದುಕೊಳ್ಳುತ್ತದೆ. ಇಲ್ಲಿನ ಜನರಿಗೆ ಸರಿಯಾದ ಮನೆಗಳಿಲ್ಲ. ಕಿರಿಯ ಪ್ರಾಥಮಿಕ ಶಾಲೆಗಳನ್ನು ಉನ್ನತ ಮಟ್ಟಕ್ಕೇರಿಸುವ ಅವಶ್ಯಕತೆಯಿದೆ ಎಂದರು.
ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ಶಂಕರ ದೇವರು, ಗ್ರಾಮದಲ್ಲಿ 45 ಕುಟುಂಬಗಳಿದ್ದು 30 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿಯವರು ಈ ಗ್ರಾಮಕ್ಕೆ ಭೇಟಿ ನೀಡಿದರೆ ಅಭಿವೃದ್ಧಿಯಾಗಬಹುದೆಂಬ ನಿರೀಕ್ಷೆಯಿದೆ.
SCROLL FOR NEXT