ರಾಜ್ಯ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗ; ಇನ್ನು ಪ್ರಯಾಣ ಸುಲಭ

Sumana Upadhyaya
ಬೆಂಗಳೂರು: ಇನ್ನು ಎರಡು ವರ್ಷಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವುದು ಪ್ರಯಾಣಿಕರಿಗೆ ಸುಲಭವಾಗಲಿದೆ. ಮುಖ್ಯ ಲಭ್ಯ ರಸ್ತೆ(ಎಂಎಆರ್ )ನಿಂದ ಪ್ಯಾಸೆಂಜರ್ ಟರ್ಮಿನಲ್ ಚತುಷ್ಪಥದಿಂದ ದಶಪಥಕ್ಕೆ ವಿಸ್ತಾರವಾಗಲಿದೆ.
ಇದೇ ಜೂನ್ 10ರಿಂದ 1.4 ಕಿಲೋ ಮೀಟರ್ ಉದ್ದದ ಮುಖ್ಯ ಲಭ್ಯ ರಸ್ತೆಯನ್ನು ಅಗಲೀಕರಣಕ್ಕೆ ಮುಚ್ಚಲಾಗುತ್ತದೆ. ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಸಂಚಾರವನ್ನು  ಹೊಸ ಷಟ್ಪಥ ರಸ್ತೆಗೆ ಸೌತ್ ಆಕ್ಸೆಸ್ ರಸ್ತೆಗೆ ತಿರುವು ನೀಡಲಾಗುತ್ತಿದ್ದು ಈಗಿರುವ ಎಂಎಆರ್ ರಸ್ತೆಗೆ ಸಮಾನಾಂತರವಾಗಿ ಇರುತ್ತದೆ. 
ಮಾರ್ಗ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುವ ವಾಹನಗಳು ಟ್ರಂಪೆಂಟ್ ಇಂಟರ್ ಚೇಂಜ್ ನಲ್ಲಿ ಬಲಗಡೆಗೆ ಮೊದಲ ತಿರುವು ತೆಗೆದುಕೊಂಡು ಸೌತ್ ಆಕ್ಸೆಸ್ ರಸ್ತೆಯನ್ನು(ಎಸ್ಎಆರ್) ಪ್ರವೇಶಿಸುತ್ತದೆ. ನಿರ್ಗಮ ಗೇಟ್ ನಿಂದ ವಿಮಾನ ನಿಲ್ದಾಣಕ್ಕೆ ಹೋಗುವವರು ನಿರ್ಗಮನ ದಾರಿಯನ್ನು ಟರ್ಮಿನಲ್ ನಿಂದ ಬಳಸಿ ಪಿ6 ಪಾರ್ಕಿಂಗ್ ನಿಂದ ಎಸ್ಎಆರ್ ಗೆ ತಲುಪಬಹುದು. ಆಗಮನ ಗೇಟ್ ನಿಂದ ಹಿಂತಿರುಗುವ ವಾಹನಗಳು ನಿರ್ಗಮನ ಹಾದಿಯನ್ನು ಎಸ್ಎಆರ್ ಗೆ ಬಳಸುತ್ತದೆ. 
ಮೈನ್ ಆಕ್ಸೆಸ್ ರೋಡ್ 2012ರ ಆರಂಭದ ವೇಳೆಗೆ ಪುನರ್ ಆರಂಭವಾಗಲಿದೆ. ಕಾರ್ಗೊ ಟ್ರಾಫಿಕ್ ಹೆಚ್ಚಳವನ್ನು ನಿಭಾಯಿಸಲು ಕಾರ್ಗೊ ಟರ್ಮಿನಲ್ಸ್ ನ್ನು ಈ ವರ್ಷದ ಅಂತ್ಯದ ಹೊತ್ತಿಗೆ ಚತುಷ್ಪಥಕ್ಕೆ ವಿಸ್ತರಿಸಲಾಗುತ್ತದೆ. 
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಪ್ರಾದೇಶಿಕ ಸಂಪರ್ಕ ಯೋಜನೆಯಡಿ, ಪ್ರಾದೇಶಿಕ ವಿಮಾನಯಾನ ಉತ್ತೇಜಿಸುವ ದೃಷ್ಟಿಯಿಂದ, ಮೈಸೂರು ಬೆಂಗಳೂರು ನಡುವೆ ನೂತನ ವಿಮಾನಯಾನ ಇಂದಿನಿಂದ ಆರಂಭವಾಗಿದೆ.
ಎರಡನೇ ವಿಮಾನ (ಉಡಾನ್-3) ಸೇವೆಗೆ ಉನ್ನತ ಶಿಕ್ಷಣ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ, ಸಚಿವ ಜಿ.ಟಿ ದೇವೇಗೌಡ ಚಾಲನೆ ನೀಡಿದ್ದಾರೆ. ಪ್ರತಿದಿನ ಬೆಳಗ್ಗೆ ಬೆಂಗಳೂರಿನಿಂದ 11.15ಕ್ಕೆ ಮೈಸೂರಿಗೆ ಆಗಮಿಸಲಿದ್ದು, ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿಗೆ ವಾಪಸ್ ತೆರಳಲಿದೆ.
SCROLL FOR NEXT