ಹಾಸನ: ಅಮ್ಮಾ, ಚಿನ್ನೂ ನಾನು ನಿಮಗೇನಾದರೂ ನೋವು ಉಂಟು ಮಾಡಿದ್ದಾದರೆ ದಯವಿಟ್ಟು ಕ್ಷಮಿಸಿ! ಲವ್ ಯು ಅಮ್ಮಾ, ಲವ್ ಯು ಚಿನ್ನೂಟೇಕ್ ಕೇರ್, ಐ ವಿಲ್ ಬಿ ಸೂನ್... ಹೀಗೊಂದು ಡೆತ್ ನೋಟ್ ಬರೆದಿಟ್ಟು ಹಾಸನ ಮೂಲದ ಯೋಧ ಹರಿಯಾಣದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಾಸನದ ಆಲೂರು ತಾಲ್ಲೂಕಿನ ಕಾದಾಳು ಗ್ರಾಮದ ಮೋಹನ್‍ಕುಮಾರ್ (28) ರಿಯಾಣದ ಶಿರಸಾದಲ್ಲಿ ಆತಮಹತ್ಯೆ ಮಾಡಿಕೊಂಡಿದ್ದಾರೆ.
ಬಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮೋಹನ್‍ಕುಮಾರ್ ಕಳೆದ ಎಂಟು ವರ್ಷಗಳಿಂದ ಶಿರಸಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.ಶುಕ್ರವಾರ ಡೆತ್ ನೋಟ್ ಬರೆದಿಟಿದ್ದ ಯೋಧ ಕಛೇರಿಯ ಶೌಚಗೃಹದಲ್ಲಿ ತನ್ನ ರೈಫಲ್ ನಿಂದಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯೋಧನ ಆತ್ಮಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ.
ಯೋಧನಿಗೆ ಕಳೆದ ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು.
ಶನಿವಾರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದ್ದು ಭಾನುವಾರ ಸ್ವಗ್ರಾಮಕ್ಕೆ ಮೃತದೇಹ ಆಗಮಿಸಲಿದೆ. ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಮೃತರಿಗೆ ಪತ್ನಿ, ತಂದೆ, ತಾಯಿ, ಸಹೋದ ಇದ್ದು ಕುಟುಂಬಿಕರು, ಸ್ನೇಹಿತರ ಶೋಕ ಮುಗಿಲು ಮುಟ್ಟಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos