ರಾಜ್ಯ

ಜೂ.19ರಿಂದ ಕೆಎಸ್ ಆರ್ ಟಿಸಿಯಿಂದ ವಿದ್ಯಾರ್ಥಿ ಬಸ್ ಪಾಸ್ ವಿತರಣೆ

Sumana Upadhyaya
ಬೆಂಗಳೂರು: ಮುಂದಿನ ಬುಧವಾರದಿಂದ 2019-20ನೇ ಶೈಕ್ಷಣಿಕ ವರ್ಷಕ್ಕೆ ಕೆಎಸ್ಆರ್ ಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಿಸಲಿದೆ. ವಿದ್ಯಾರ್ಥಿಗಳು ಬಸ್ ಪಾಸ್ ಗೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. 
ಕೆಎಸ್ಆರ್ ಟಿಸಿ ವೆಬ್ ಸೈಟ್ www.ksrtc.in ನಲ್ಲಿ ತಮ್ಮ ವಿವರಗಳನ್ನು ಭರ್ತಿ ಮಾಡಿ ಅದರ ಪ್ರತಿಯನ್ನು ತೆಗೆದು ಶಾಲೆ ಅಥವಾ ಕಾಲೇಜಿನ ಮುಖ್ಯಸ್ಥರ ದಾಖಲಾತಿ ಪಡೆದು ಕೆಎಸ್ಆರ್ ಟಿಸಿ ನಿಗಮಕ್ಕೆ ಸಲ್ಲಿಸಿದರೆ ಪಾಸು ದೊರೆಯುತ್ತದೆ ಎಂದು ಹೇಳಿಕೆ ಕೆಎಸ್ ಆರ್ ಟಿಸಿ ಹೇಳಿಕೆ ತಿಳಿಸಿದೆ.
ಈ ವರ್ಷ ಕೆಎಸ್ಆರ್ ಟಿಸಿ ವಿದ್ಯಾರ್ಥಿ ಬಸ್ ಪಾಸ್ ದರವನ್ನು ಶೇಕಡಾ 20ರಷ್ಟು ಏರಿಕೆ ಮಾಡಿತ್ತು. ಆದರೆ ನಂತರ ಸರ್ಕಾರ ಮಧ್ಯೆ ಪ್ರವೇಶಿಸಿ ಹಿಂದಿನ ದರವನ್ನೇ ಮುಂದುವರಿಸಿದೆ.
ನೂತನ ಬಸ್ ಪಾಸ್ ದರ ಇಂತಿದೆ:
ಪ್ರಾಥಮಿಕ ಶಾಲೆ-ಎ150
ಹೈಸ್ಕೂಲ್ ಬಾಲಕರು-ಎ750
ಹೈಸ್ಕೂಲ್ ಬಾಲಕಿಯರು- ಎ550
ಪಿಯುಸಿ/ಡಿಗ್ರಿ/ ಡಿಪ್ಲೊಮಾ-ಎ1,050
ವೃತ್ತಿಪರ ಕೋರ್ಸ್ ಗಳು-ಎ1,550
ಸಂಜೆ ಕಾಲೇಜು/ ಪಿಎಚ್ ಡಿ-ಎ1,350
ಎಸ್ ಸಿ/ ಎಸ್ ಟಿ ವಿದ್ಯಾರ್ಥಿ ಪಾಸ್-ಎ150
ಐಟಿಐ ಎ1,310 ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಮತ್ತು ಎ160-ಎಸ್ ಸಿ/ಎಸ್ ಟಿ ವಿದ್ಯಾರ್ಥಿಗಳು.
SCROLL FOR NEXT