ರಾಜ್ಯ

ಸಕಲೇಶಪುರ: 22 ಜಿಂಕೆಗಳನ್ನು ಬಂಧಿಸಿಟ್ಟಿದ್ದ ಎಸ್ಟೇಟ್ ಮಾಲೀಕನ ವಿರುದ್ಧ ಕೇಸು ದಾಖಲು

Sumana Upadhyaya
ಹಾಸನ: ಸಕಲೇಶಪುರ ತಾಲ್ಲೂಕಿನ ತನ್ನ ಕಾಫಿ ಎಸ್ಟೇಟ್ ನಲ್ಲಿ 22 ಜಿಂಕೆಗಳ ಹಿಂಡನ್ನು ಹಿಡಿದದ್ದಕ್ಕಾಗಿ ವನ್ಯಜೀವಿ ಕಾಯ್ದೆಯಡಿ ಅರಣ್ಯ ಇಲಾಖೆ ಅಧಿಕಾರಿಗಳು ಕೇಸು ದಾಖಲಿಸಿದ್ದಾರೆ. ಆರೋಪಿ ಎಸ್ಟೇಟ್ ಮಾಲೀಕ ತಲೆಮರೆಸಿಕೊಂಡಿದ್ದಾನೆ.
ಗ್ರಾಮಸ್ಥರೊಬ್ಬರು ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಜಿಂಕೆಗಳನ್ನು ರಕ್ಷಿಸಿದರು. ಎಸ್ಟೇಟ್ ಮಾಲೀಕ 22 ಜಿಂಕೆ ಮರಿಗಳನ್ನು ಮತ್ತು ಅವುಗಳಿಗೆ ಹಾಲುಣಿಸುತ್ತಿದ್ದ ದೊಡ್ಡ ಜಿಂಕೆಯನ್ನು ಕೂಡ ಹಿಡಿದು ಬಂಧಿಸಿಟ್ಟಿದ್ದ. ಮಾಲೀಕ ತನ್ನ ಎಸ್ಟೇಟ್ ನಲ್ಲಿ ಕಬ್ಬಿಣದ ಕಂಬಿ ಮೂಲಕ ಬೇಲಿ ನಿರ್ಮಿಸಿಕೊಂಡಿದ್ದ.
ಜಿಂಕೆ ಮತ್ತು ಅದರ ಮರಿಗಳು ಆಹಾರ, ನೀರು ಹುಡುಕಿಕೊಂಡು ಎಸ್ಟೇಟ್ ಗೆ ನುಗ್ಗಿದ್ದ ವೇಳೆ ಮಾಲೀಕ ಅವುಗಳನ್ನು ಬಂಧಿಸಿದ್ದ. ರಕ್ಷಿಸಲ್ಪಟ್ಟ ಎಲ್ಲಾ ಜಿಂಕೆಗಳನ್ನು ಒಟ್ಟಿಗೆ ಬಂಧನದಿಂದ ಬಿಡಿಸಿ ಸಾಗಿಸುವುದು ಕಷ್ಟವಾಗುತ್ತದೆ. ಜಿಂಕೆಗಳು ತುಂಬ ಸೂಕ್ಷ್ಮ ಪ್ರಾಣಿಗಳು ಎನ್ನುತ್ತಾರೆ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು. 
ಸಕಲೇಶಪುರ ಗ್ರಾಮಾಂತರ ಪೊಲೀಸರು ಮಾಲೀಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವನ್ಯಜೀವಿಗಳನ್ನು ಬಂಧನದಲ್ಲಿಟ್ಟುಕೊಳ್ಳುವುದು ಅಥವಾ ಮನೆಯಲ್ಲಿ ಇಟ್ಟುಕೊಳ್ಳುವುದು ಅಪರಾಧವಾಗುತ್ತದೆ ಎನ್ನುತ್ತಾರೆ ಪರಿಸರ ತಜ್ಞ ಹೆಚ್ ಎ ಕಿಶೋರ್ ಕುಮಾರ್.
SCROLL FOR NEXT