ರಾಜ್ಯ

ಬೆಂಗಳೂರು: ಮೊಟ್ಟ ಮೊದಲ ಪ್ಲಾಸ್ಟಿಕ್ ಮುಕ್ತ ವಲಯವಾಗಲಿದೆ ಬೊಮ್ಮನಹಳ್ಳಿ

Shilpa D
ಬೆಂಗಳೂರು: ಇನ್ನೂ ಮೂರು ತಿಂಗಳಲ್ಲಿ ಬೊಮ್ಮನಹಳ್ಳಿಯ 16 ವಾರ್ಡ್ ಗಳು ಪ್ಲಾಸ್ಟಿಕ್ ಮುಕ್ತ ವಲಯವಾಗುವ ಗುರಿ ಹೊಂದಿದೆ. ಬೊಮ್ಮನಹಳ್ಳಿಯ 175 ಹಾಗೂ ಹೊಂಗಸಂದ್ರದ 189 ವಾರ್ಡ್ ಗಳಲ್ಲಿ ಜೂನ್ 17 ರಿಂದ ಮೊದಲ ಹಂತದ ಪ್ಲಾಸ್ಟಿಕ್ ಮುಕ್ತ ಕಾರ್ಯಾಚರಣೆ ಆರಂಭಿಸಿದೆ, 
ಜೂನ್ 16 ರಂದು ಇಲ್ಲಿನ ನಿವಾಸಿಗಳು ಬಿಬಿಎಂಪಿ ಜಂಟಿ ಆಯುಕ್ತೆ ಸೌಜನ್ಯ ಅವರನ್ನು ಭೇಟಿಯಾಗಿದ್ದರು, ಅಂಗಡಿಗಳಲ್ಲಿ  ಹೆಚ್ಚಿನ ಪ್ಲಾಸ್ಟಿಕ್ ಬಳಕೆಯಾಗುತ್ತಿರುವುದರಿಂದ್ ನಾವು ಬೇಸತ್ತಿದ್ದೇವೆ, ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಮನವಿ ಮಾಡಿದ ಮಾರನೇ ದಿನವೇ  ಬಿಬಿಎಂಪಿ ಕಾರ್ಯಾಚರಣೆ ಆರಂಭಿಸಿರುವುದಕ್ಕೆ ನಿವಾಸಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.
ಮೂವರು ಹೆಲ್ತ್ ಇನ್ಸ್ ಫೆಕ್ಟರ್ ಗಳನ್ನೊಳಗೊಂಡ  7 ತಂಡ ಹಾಗೂ  ಪ್ರತಿ ಮನೆಯಲ್ಲೂ ತಲಾ ಒಬ್ಬ ಸದಸ್ಯರು,  ವಿವಿಧ ಸ್ಥಳಗಳಿಗೆ ತೆರಳಿ ಪ್ಲಾಸ್ಚಿಕ್ ಸೀಜ್ ಮಾಡಿದ್ದಾರೆ. ಸುಮಾರು 1 ಟನ್ ಪ್ಲಾಸ್ಟಿಕ್ ಸೀಜ್ ಮಾಡಲಾಗಿದ್ದು, 2 ಲಕ್ಷ ರು ದಂಡ ವಸೂಲಿ ಮಾಡಲಾಗಿದೆ. ಇನ್ನೂ ಮೂರು ತಿಂಗಳಲ್ಲಿ ಬೊಮ್ಮನಹಳ್ಳಿ ವಲಯವನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಹಿರಿಯ ಹೆಲ್ತ್ ಇನ್ಸ್ ಪೆಕ್ಟರ್ ವೆಂಕಟೇಶ್ ಹೇಳಿದ್ದಾರೆ.
ಮಾರಾಟಗಾರರು ಶಾಸಕ ಸತೀಶ್ ರೆಡ್ಡಿ ಅವರನ್ನು ಭೇಟಿ ಮಾಡಿ,ಪ್ಲಾಸ್ಟಿಕ್ ಕವರ್ ಮತ್ತೆ ಉಪಯೋಗಿಸಲು ಅವಕಾಶ ಕೊಡಿಸುವಂತೆ ಮನವಿ ಮಾಡಿದರು, ಆದರೆ ವ್ಯಾಪಾರಸ್ಥರ ಮನವಿಯನ್ನು ಶಾಸಕ ಸತೀಶ್ ರೆಡ್ಡಿ ನಿರಾಕರಿಸಿದರು. ಮೊದಲ ಬಾರಿಗೆ ರಾಜಕಾರಣಿಯೊಬ್ಬರು ಪ್ಲಾಸ್ಟಿಕ್ ನಿಷೇಧಿಸಲು ಕೈ ಜೋಡಿಸುತ್ತಿದ್ದಾರೆ ಎಂದು ಡಾ,ಶಾಂತಿ ತಿಳಿಸಿದ್ದಾರೆ. 
SCROLL FOR NEXT