ರಾಜ್ಯ

ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ನೀರಿನ ಕೊರತೆ; ಜಲವಿದ್ಯುತ್ ಉತ್ಪಾದನೆಯಲ್ಲಿ ಕಡಿತ

Sumana Upadhyaya
ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದ ಶರಾವತಿ ಜಲಾನಯನ ಪ್ರದೇಶದಲ್ಲಿ ಈ ವರ್ಷ ಇಲ್ಲಿಯವರೆಗೆ ಸರಿಯಾಗಿ ಮಳೆ ಬೀಳದಿರುವುದರಿಂದ ಜಲವಿದ್ಯುತ್ ತಯಾರಿಯನ್ನು ಕಡಿಮೆಗೊಳಿಸಿದ್ದಾರೆ.ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ಜಲಾಶಯದಲ್ಲಿ ಇನ್ನು 15 ದಿನಗಳವರೆಗೆ ಮಾತ್ರ ವಿದ್ಯುತ್ ತಯಾರಿಸಬಹುದು. 
ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಹೆಚ್ ಮೋಹನ್, ಜಲಾಶಯದಲ್ಲಿ ಸರಿಯಾಗಿ ನೀರಿಲ್ಲದಿರುವುದರಿಂದ ವಿದ್ಯುತ್ ಉತ್ಪಾದನೆಯನ್ನು ಕಡಿಮೆ ಮಾಡಿದ್ದೇವೆ. ಈಗಿರುವ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸಲು ಇನ್ನು 20-25 ದಿನಗಳವರೆಗೆ ಸಾಕಾಗಬಹುದಷ್ಟೆ ಎನ್ನುತ್ತಾರೆ.
ಜಲಾಶಯದ ಗರಿಷ್ಠ ನೀರಿನ ಮಟ್ಟ 1,819 ಅಡಿಯಾಗಿದ್ದು ನಿನ್ನೆ ಜಲಾಶಯದಲ್ಲಿ 1,744.95 ಅಡಿ ಇತ್ತು. ಜಲಾಶಯದಲ್ಲಿ ಸದ್ಯ ಶೇಕಡಾ 9.40ರಷ್ಟು ನೀರು ಸಿಗುತ್ತಿದ್ದು ಅಧಿಕಾರಿಗಳು ಹೇಳುವ ಪ್ರಕಾರ, ಸುಮಾರು 12.05 ದಶಲಕ್ಷ ವಿದ್ಯುತ್ ಘಟಕಗಳು ಪ್ರತಿದಿನ ಉತ್ಪತ್ತಿಯಾಗುತ್ತದೆ.
ಆದರೆ ಕಳೆದೊಂದು ವಾರದಿಂದ ವಿದ್ಯುತ್ ಉತ್ಪಾದನೆ ತುಂಬಾ ಕಡಿಮೆಯಾಗಿದೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಒಳಹರಿವು 10 ಸಾವಿರ ಕ್ಯೂಸೆಕ್ ಇದ್ದಿತು. 
SCROLL FOR NEXT