ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ
ಕಲಬುರಗಿ: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಹಾಸಿಗೆ ಬೇಡವೆಂದು ಹೇಳಿ ಚಾಪೆ ಮೇಲೆಯೇ ಮಲಗಿ ಸರಳತೆ ಮೆರೆದರು, ಆದರೆ ಸಿಎಂ ಕುಮಾರಸ್ವಾಮಿ ಅವರ ಒಂದು ದಿನದ ಗ್ರಾಮ ವಾಸ್ಯವ್ಯಕ್ಕಾಗಿ ಎಷ್ಚು ಹಣ ಖರ್ಚಾಗಿದೆ ಎಂೂಬುದನ್ನು ನೀವೇ ನೋಡಿ.
ಗ್ರಾಮವಾಸ್ಯವ್ಯ ಕಾರ್ಯಕ್ರಮದ ಭಾಗವಾಗಿ ಚಂಡರಕಿ ಗ್ರಾಮದಲ್ಲಿ 24 ಗಂಟೆಗಳಿಗಾಗಿ ಸಿಎಂ ಕುಮಾರಸ್ವಾಮಿಗಾಗಿ ಖರ್ಚು ಮಾಡಿದ್ದು ಬರೋಬ್ಬರಿ 1 ಕೋಟಿ ರುಪಾಯಿ ಹಣ, ಅದರಲ್ಲಿ ಯಾವುದಕ್ಕೆ ಎಷ್ಟೆಟ್ಟು ಖರ್ಚಾಗಿದೆ ಎಂಬ ವಿವರ ಇಲ್ಲಿದೆ,
ಚಂಡರಕಿ ಗ್ರಾಮಕ್ಕೆ ಆಗಮಿಸಿದ್ದವರಿಗಾಗಿ ಊಟದ ವ್ಯವಸ್ಥೆ ಮಾಡಲು ಸುಮಾರು 25 ಲಕ್ಷ ರು ಹಣ ಖರ್ಚಾಗಿದೆ, ಹಾಗೂ ಕಚೇರಿಗಳನ್ನು ಶಿಫ್ಟ್ ಮಾಡಲು ಮತ್ತು ಅರ್ಜಿಗಳನ್ನು ಸ್ವೀಕರಿಸುವ ಕೌಂಟರ್ ಗಳಿಗಾಗಿ 25 ಲಕ್ಷ ಹಣ ಖರ್ಚಾಗಿದೆ.
ಸುಮಾರು 25 ಸಾವಿರ ಮಂದಿಗೆ ಊಟ ತಯಾರಿಸಲಾಗಿತ್ತು, ಹಾಗೂ ರಾತ್ರಿ ಊಟಕ್ಕೆ 500 ಮಂದಿ ವಿದ್ಯಾರ್ಥಿಗಳು, ಶಿಕ್ಷಕರು, ಅಧಿಕಾರಿಗಳು, ಸ್ಥಳೀಯ ರಾಜಕಾರಣಿಗಳು ಇದ್ದರು, ಇದೇ 25 ಲಕ್ಷ ಹಣದಲ್ಲಿ ಬೆಳಗಿನ ಉಪಹಾರಕ್ಕೂ ವ್ಯವಸ್ಥೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಇನ್ನುಳಿದ 50 ಲಕ್ಷ ಹಣ,. ಕುಮಾರಸ್ವಾಮಿ ಭಾಗವಹಿಸುವ ವೇದಿಕೆ, ಜನತಾ ದರ್ಶನ ಕಾರ್ಯಕ್ರಮಕ್ಕಾಗಿ ಖರ್ಚು ಮಾಡಲಾಗಿದೆ, ಸುಮಾರು 4 ಸಾವಿರ ಮಂದಿ ಜನತಾ ದರ್ಶನದಲ್ಲಿ ಪಾಲ್ಗೋಂಡಿದ್ದು, ಅದರಲ್ಲಿ 1,800 ಆನ್ ಲೈನ್ ಅರ್ಜಿಗಳು ಬಂದಿವೆ, ಕುಮಾರಸ್ವಾಮ ಜನತಾ ದರ್ಶನದ ವೇಳೆ ಶಾಸಕರು ಮತ್ತು ಅಧಿಕಾರಿಗಳ ದಂಡೇ ಹರಿದು ಬಂದಿತ್ತು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos