ಸಾಂದರ್ಭಿಕ ಚಿತ್ರ 
ರಾಜ್ಯ

ಮದುವೆಗೆ ಪೋಷಕರ ನಿರಾಕರಣೆ: ಬೆಟ್ಟದಿಂದ ಜಿಗಿದು ಆತ್ಮಹತ್ಯೆಗೆ ಯತ್ನ, ಜೋಡಿ ಸಾವಿನಿಂದ ಪಾರು

ತಮ್ಮ ಮದುವೆಗೆ ಪೋಷಕರು ಒಪ್ಪಿಗೆ ನೀಡಲಿಲ್ಲವೆಂದು ಪ್ರೇಮಿಗಳು ರಾಮನಗರ ಜಿಲ್ಲೆಯ ...

ಬೆಂಗಳೂರು: ತಮ್ಮ ಮದುವೆಗೆ ಪೋಷಕರು ಒಪ್ಪಿಗೆ ನೀಡಲಿಲ್ಲವೆಂದು ಪ್ರೇಮಿಗಳು ರಾಮನಗರ ಜಿಲ್ಲೆಯ ರಾಮದೇವರಬೆಟ್ಟದಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಕಳೆದ ಬುಧವಾರ ನಡೆದಿದೆ.
ಕಳೆದ ಬುಧವಾರ ಸಂಜೆ ಜೋಡಿ ಅಪರಾಹ್ನ 2.30ಕ್ಕೆ ರಾಮದೇವರಬೆಟ್ಟಗೆ ಬಂದು ಎತ್ತರವಾದ ಬೆಟ್ಟದಿಂದ ಕೆಳಗೆ ಜಿಗಿದರು. ಮರವೊಂದರ ಮೇಲೆ ಮೊದಲು ಬಿದ್ದ ಜೋಡಿ ನಂತರ ಉರುಳಿ ಕೆಳಗೆ ಬಿತ್ತು. 100 ಅಡಿ ಎತ್ತರದಿಂದ ಬಿದ್ದರೂ ಕೂಡ ಗಾಯಗೊಂಡು ಸಾವಿನಿಂದ ಪಾರಾಗಿದ್ದಾರೆ. ಜೋಡಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಪರಿಸ್ಥಿತಿ ಸ್ಥಿರವಾಗಿದೆ.
21 ವರ್ಷದ ಸುರೇಶ್ ಮತ್ತು 18 ವರ್ಷದ ಆತನ ಪ್ರೇಮಿ ಶ್ರೇಯಾ(ಹೆಸರು ಬದಲಿಸಲಾಗಿದೆ) ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ಬೆಂಗಳೂರಿನ ಆವಲಹಳ್ಳಿಯ ನಿವಾಸಿ ಸುರೇಶ್ ಆಗಿದ್ದು ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಶ್ರೇಯಾ ಶ್ರೀನಗರ ವಾಸಿಯಾಗಿದ್ದು ಐಟಿಐ ವ್ಯಾಸಂಗ ಮಾಡುತ್ತಿದ್ದಾಳೆ.
ಕಳೆದ ಕೆಲ ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದು ಮದುವೆಯಾಗಲು ನಿರ್ಧರಿಸಿದ್ದರು. ತಮ್ಮ ಮದುವೆ ವಿಷಯವನ್ನು ಪೋಷಕರಿಗೆ ಹೇಳಿದಾಗ ಶ್ರೇಯಾಳ ಪೋಷಕರು ಸುತಾರಂ ಒಪ್ಪಲಿಲ್ಲ. ಇಬ್ಬರೂ ಬೇರೆ ಜಾತಿಯವರಾಗಿದ್ದಾರೆ.
ರಾಮನಗರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಅಪ್ರಾಪ್ತ ಬಾಲಕಿಯೊಂದಿಗೆ ಅನುಚಿತ ವರ್ತನೆ: ಪೋಕ್ಸೋ ಕೇಸ್ ದಾಖಲಾಗುತ್ತಿದಂತೆ ಮಲ್ಲಿಕಾರ್ಜುನ ಮುತ್ಯಾ video ರಿಲೀಸ್!

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

SCROLL FOR NEXT