ರಾಜ್ಯ

ಸಿಎಂ ಗ್ರಾಮ ವಾಸ್ತವ್ಯದ ವೇಳೆ ಭದ್ರತಾ ಲೋಪ: ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶ

Raghavendra Adiga

ರಾಯಚೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇತ್ತೀಚೆಗೆ ನಡೆಸಿದ್ದ ಗ್ರಾಮ ವಾಸ್ತವ್ಯದ ವೇಳೆ ಪ್ರತಿಭಟನೆಗಳು ನಡೆದಿದ್ದು ಇದಕ್ಕೆ ಭದ್ರತಾ ಲೋಪವೇ ಕಾರಣವೆನ್ನುವ ನೆಪದಲ್ಲಿ ಇಬ್ಬರು ಪೋಲೀಸ್ ಅಧಿಕಾರಿಗಳ ಅಮಾನತಿಗೆ ಆದೇಶಿಸಲಾಗಿದೆ.

ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ನಿಂಗಪ್ಪ ಹಾಗೂ ಯರಗೇರಾ ಇನ್ಸ್​ಪೆಕ್ಟರ್​ ದತ್ತಾತ್ರೇಯ ಅವರುಗಳ ಅಮಾನತಿಗೆ ಆದೇಶಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ಬುಧವಾರದಂದು ರಾಯಚೂರಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದ ವೇಳೆ ವೈಟಿಪಿಎಸ್ ಗುತ್ತಿಗೆ ಕಾರ್ಮಿಕರು ಪ್ರತಿಭಟನೆ ನಡೆಸಿ ಸಿಎಂ ತೆರಳುತ್ತಿದ್ದ ಬಸ್ ಗೆ ಮುತ್ತಿಗೆ ಹಾಕಿದ್ದರು. 
ಪ್ರತಿಭಟನೆಗಳಿಂದ ಬೇಸತ್ತ ಮುಖ್ಯಮಂತ್ರಿ ಲಾಠಿಚಾರ್ಜ್ ಮಾಡುವ ಎಚ್ಚರಿಕೆ ನೀಡಿದ್ದರು. ಇದು ರಾಜ್ಯದಾದ್ಯಂತ ವ್ಯಾಪಕ ಟೀಕೆಗೆ ಕಾರಣವಾಗಿ ಸಿಎಂ ಕುಮಾರಸ್ವಾಮಿ ಇರುಸು ಮುರುಸು ಅನುಭವಿಸಬೇಕಾಯಿತು. ಇದರ ಪರಿಣಾಮ ಈಗ ಸಿಎಂ ಕಾರ್ಯಕ್ರಮಕ್ಕೆ ಸರಿಯಾದ ಭದ್ರತೆ ಒದಗಿಸದ ಹಿನ್ನೆಲೆ ಇಬ್ಬರು ಪೋಲೀಸರನ್ನು ಅಮಾನತು ಮಾಡಲು ನಿರ್ಧರಿಸಲಾಗಿದೆ.
ಇನ್ನು ಅಮಾನತು ಆದೇಶ ಜಾರಿಗೆ ಬರಲು ಬಳ್ಳಾರಿ ವಲಯದ ಐಜಿಯವರಿಂದ ಅನುಮತಿ ಬೇಕಿದೆ.
SCROLL FOR NEXT