ರಾಜ್ಯ

ಮೇಲಾಧಿಕಾರಿ ಕಿರುಕುಳ: ರಜೆ ಮೇಲೆ ತೆರಳಿದ ಗದಗ ಜಿಲ್ಲೆಯ 6 ಪಿಡಬ್ಲ್ಯುಡಿ ಎಂಜಿನಿಯರ್ ಗಳು

Sumana Upadhyaya
ಗದಗ: ಮೇಲಾಧಿಕಾರಿ ಕಿರುಕುಳ ತಾಳಲಾಗುತ್ತಿಲ್ಲ ಎಂದು ಆರೋಪಿಸಿ ರೋಣ ತಾಲ್ಲೂಕಿನ ಲೋಕೋಪಯೋಗಿ ಇಲಾಖೆಯ ಆರು ಮಂದಿ ಸಹಾಯಕ ಎಂಜಿನಿಯರ್ ಗಳು ಒಂದು ತಿಂಗಳ ರಜೆ ಮೇಲೆ ತೆರಳಿದ್ದಾರೆ. 
ಆದರೆ ಅಧಿಕ ಕೆಲಸದ ಒತ್ತಡದಿಂದ ತಮಗೆ ರಜೆ ಕೋರಿ ಸಹಾಯಕ ಎಂಜಿನಿಯರ್ ಗಳು ಮೊದಲೇ ರಜೆ ಕೋರಿದ್ದರು ಎಂದು ಸಹಾಯಕ ಕಾರ್ಯಕಾರಿ ಎಂಜಿನಿಯರ್ ಕೆ ಎ ಹಡ್ಲಿ ತಿಳಿಸಿದ್ದಾರೆ.
ಸಹಾಯಕ ಎಂಜಿನಿಯರ್ ಗಳಾದ ಪಿ ಎಚ್ ಕೊಟಬಾಲ್, ಆರ್ ಡಿ ಯೆಲಿಗಾರ್, ಎಲ್ ಎ ಬ್ಯಾಲಿ, ಎಂ ಬಿ ಮುಡಿಬಸನ್ ಗೌಡರ್, ಗುರುನಾಥ್ ಮತ್ತು ಡಿ ಎಲ್ ಶಾಸ್ತ್ರಿ ಜೂನ್ 29ರಿಂದ ಜುಲೈ 26ರವರೆಗೆ ಒಂದು ತಿಂಗಳು ರಜೆಗೆ ಅರ್ಜಿ ಹಾಕಿದ್ದು ತಾವು ಸಾಮೂಹಿಕ ರಜೆ ಹಾಕಲು ಮೇಲಾಧಿಕಾರಿ ಹಡ್ಲಿಯವರ ಕಿರುಕುಳವೇ ಕಾರಣ ಎಂದು ಈ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ರಜೆ ಅರ್ಜಿಯಲ್ಲಿ ವೈಯಕ್ತಿಕ ಕಾರಣಗಳಿಗೆ ರಜೆ ತೆಗೆದುಕೊಳ್ಳುತ್ತಿರುವುದಾಗಿ ನಮೂದಿಸಿದ್ದಾರೆ.
ಲಂಚ ತೆಗೆದುಕೊಳ್ಳುವಂತೆ ಕಿರುಕುಳ ನೀಡುತ್ತಿದ್ದು, ತಮ್ಮನ್ನು ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಸಹಾಯಕ ಎಂಜಿನಿಯರ್ ಗಳು ಆರೋಪಿಸುತ್ತಾರೆ. ಆದರೆ ಇದರಿಂದ ತೊಂದರೆಯಾಗುತ್ತಿರುವುದು ಸಾರ್ವಜನಿಕರಿಗೆ. ತಮ್ಮ ಕೆಲಸ ಕಾರ್ಯಗಳಿಗೆ ಕಚೇರಿಗೆ ಹೋಗುವ ಜನರು ಖಾಲಿ ಕುರ್ಚಿಗಳನ್ನು ನೋಡಿ ವಾಪಸ್ಸಾಗಬೇಕಾಗಿದೆ.
SCROLL FOR NEXT