ರಾಜ್ಯ

2020ರ ವೇಳೆಗೆ ಬೆಂಗಳೂರು-ಮೈಸೂರು ದಶಪಥ ರಸ್ತೆ ನಿರ್ಮಾಣ

Sumana Upadhyaya
ಮೈಸೂರು: ಬೆಂಗಳೂರು-ಮೈಸೂರು ಮಧ್ಯೆ ದಶಪಥ ರಸ್ತೆ 2020ರ ಡಿಸೆಂಬರ್ ಗೆ ಪೂರ್ಣವಾಗಲಿದೆ ಎಂದು ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ನೈಸ್ ರಸ್ತೆಯಿಂದ ನಿಡುಗಟ್ಟದವರೆಗೆ ಭೂಮಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ಮುಗಿಸಿದ್ದು ನಿಡುಗಟ್ಟ ಮತ್ತು ಮೈಸೂರು ಮಧ್ಯೆ ಶೇಕಡಾ 80ರಷ್ಟು ಭೂಮಿ ಖರೀದಿಸುವ ಕಾರ್ಯ ನಡೆದಿದೆ ಎಂದರು.
ಆದಷ್ಟು ಶೀಘ್ರದಲ್ಲಿಯೇ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಕಾಂಟ್ರಾಕ್ಟರ್ ಗಳು ನೀಡಿದ್ದು ಸದ್ಯದಲ್ಲಿಯೇ ಜಮೀನು ಖರೀದಿಸುವ ಕಾರ್ಯ ನಡೆಯುತ್ತಿದೆ ಎಂದರು.
ತಳಬೆಟ್ಟ ಮತ್ತು ಎಂಎಂ ಬೆಟ್ಟದ ಮಧ್ಯೆ 17 ಕಿಲೋ ಮೀಟರ್ ಗಳ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕೆ 80 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು ಸೇತುವೆಗಳ ನಿರ್ಮಾಣ ಕೂಡ ಅದರಲ್ಲಿ ಸೇರಿಕೊಂಡಿದೆ. ಬೆಟ್ಟದ ತುದಿಯಲ್ಲಿರುವ ಮುಡುಕುತೊರೆ ದೇವಸ್ಥಾನಕ್ಕೆ ರಸ್ತೆ ನಿರ್ಮಾಣ ಕಾಮಗಾರಿಯನ್ನು ಸಹ ಉದ್ಯಾನ ಜೊತೆ ಮಾಡಲಾಗುವುದು ಎಂದು ಸಚಿವ ರೇವಣ್ಣ ತಿಳಿಸಿದರು.
SCROLL FOR NEXT