ಬೆಂಗಳೂರು: ಡ್ರೋನ್ ಆಧಾರಿತ ಸಮೀಕ್ಷೆಯಲ್ಲಿ ಯಶಸ್ಸು ಕಂಡುಬಂದ ನಂತರ ಕಂದಾಯ ಇಲಾಖೆ ಭಾರತೀಯ ಸಮೀಕ್ಷೆ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಮೂಲಕ ರಾಜ್ಯದಲ್ಲಿ ಜಮೀನುಗಳ ಸಮೀಕ್ಷೆ ನಡೆಸಲು ಒಪ್ಪಂದಕ್ಕೆ ಸಹಿ ಹಾಕಿದೆ. ಈ ಮೂಲಕ ಇನ್ನು ಕರ್ನಾಟಕದಾದ್ಯಂತ ಡ್ರೋನ್ ಮತ್ತು ಮಾನವರಹಿತ ವಿಮಾನ ವಾಹಕಗಳ ಮರು ಸಮೀಕ್ಷೆ ನಡೆಯಲಿದೆ.
ಈ ತಂತ್ರಜ್ಞಾನವನ್ನು ಇತ್ತೀಚೆಗೆ ಬೆಂಗಳೂರಿನ ಜಯನಗರದಲ್ಲಿ ಮತ್ತು ರಾಮನಗರ ಪಟ್ಟಣದಲ್ಲಿ ಪ್ರಾಯೋಗಿಕ ಸಮೀಕ್ಷೆಯನ್ನು ಕಂದಾಯ ಇಲಾಖೆ ಕೈಗೊಂಡಿತ್ತು. ಮೊದಲ ಹಂತದಲ್ಲಿ ತುಮಕೂರು, ಹಾಸನ, ಉತ್ತರ ಕನ್ನಡ, ಬೆಳಗಾವಿ, ರಾಮನಗರ ಮತ್ತು ಬೆಂಗಳೂರು ನಗರಗಳಲ್ಲಿ ಡ್ರೋನ್ / ಮಾನವರಹಿತ ವಿಮಾನ ವಾಹಕಗಳ ಮೂಲಕ ಜಮೀನಿನ ಸಮೀಕ್ಷೆ ನಡೆಯಲಿದೆ.