ರಾಜ್ಯ

ಹೆಚ್ಚಾಗಿದೆ ಬಿಸಿಲಿನ ದಾಹ; ಹಣ್ಣು, ಎಳನೀರು ಮಾರಾಟಗಾರರಿಗೆ ಬಂಪರ್

Sumana Upadhyaya
ಬೆಂಗಳೂರು; ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಿಸಿಲು ಕಾವು ಏರುತ್ತಿದೆ. ಫೆಬ್ರವರಿ ತಿಂಗಳಿನಲ್ಲಿಯೇ 35 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಕಲ್ಲಂಗಡಿ ಹಣ್ಣು, ಎಳನೀರು ವ್ಯಾಪಾರ ಬಿಸಿಲಿಗೆ ಜೋರಾಗಿಯೇ ಸಾಗುತ್ತಿದೆ.
ಸಾಮಾನ್ಯವಾಗಿ ಬೇಸಿಗೆ ಕಾಲ ಕಾಲಿಡುವುದು ಶಿವರಾತ್ರಿ ಮುಗಿದ ಮೇಲೆ. ಮಾರ್ಚ್ 4ರಂದು ಶಿವರಾತ್ರಿಯಿದ್ದು ಅದಕ್ಕೆ ಮೊದಲೇ ಫೆಬ್ರವರಿ ಆರಂಭದಲ್ಲಿಯೇ ಬಿಸಿಲು ಕಾಲಿಟ್ಟಿದ್ದರಿಂದ ಹಣ್ಣು, ಎಳನೀರು ಮಾರಾಟದಲ್ಲಿ ಶೇಕಡಾ 75ರಷ್ಟು ಏರಿಕೆಯಾಗಿತ್ತು. ಮಾರುಕಟ್ಟೆಯಲ್ಲಿ ಒಂದು ಎಳನೀರಿಗೆ 20 ರೂಪಾಯಿಯಿಂದ 35 ರೂಪಾಯಿಗಳವರೆಗೆ ಇದೆ. ಕಲ್ಲಂಗಡಿ ಬೆಲೆ ಕೆಜಿಗೆ 20 ರೂಪಾಯಿ ಇದೆ. ಮುಂದಿನ ತಿಂಗಳು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ನಾನೀಗ ಎಳನೀರನ್ನು ಕೆಜಿಗೆ 30ರೂಪಾಯಿಗೆ ಮಾರಾಟ ಮಾಡುತ್ತಿದ್ದು ಮುಂದಿನ ತಿಂಗಳು ಅದು 35ರಿಂದ 40 ರೂಪಾಯಿಯಾಗುವ ಸಾಧ್ಯತೆಯಿದೆ. ಎಳನೀರನ್ನು ವಿವಿಧ ಜಿಲ್ಲೆಗಳಿಂದ ತರಿಸಲಾಗುತ್ತದೆ. ಮಂಡ್ಯ, ಮದ್ದೂರು, ದಾವಣಗೆರೆಗಳಿಂದ ಸಗಟು ದರದಲ್ಲಿ 12 ರೂಪಾಯಿಗಳಿಂದ 24 ರೂಪಾಯಿಗಳವರೆಗೆ ತರಿಸಲಾಗುತ್ತದೆ. ಪ್ರತಿದಿನ 150ರಿಂದ 200 ಎಳನೀರಿನವರೆಗೆ ಮಾರಾಟ ಮಾಡುತ್ತೇವೆ ಎನ್ನುತ್ತಾರೆ ಸಿಬಿಐ ವ್ಯಾಪಾರಿಗಳಾದ  ಆರ್ಮುಗಂ ಮತ್ತು ಚನ್ನೇ ಗೌಡ.
SCROLL FOR NEXT