ರಾಜ್ಯ

ಸಂಚಾರ ದಟ್ಟಣೆ; ಕಬ್ಬನ್ ಪಾರ್ಕ್ ನ ಮೂರು ರಸ್ತೆಗಳು ಶಾಶ್ವತ ಬಂದ್

Sumana Upadhyaya
ಬೆಂಗಳೂರು: ನಗರದ ಬಹುಮುಖ್ಯ ಆಕರ್ಷಣೆಯ ತಾಣ ಕಬ್ಬನ್ ಪಾರ್ಕ್ ರಸ್ತೆಯಲ್ಲಿ ಇನ್ನು ಮುಂದೆ ಸಂಚಾರಿ ದಟ್ಟಣೆ ಕಡಿಮೆಯಾಗಬಹುದು. ಇನ್ನು ಮುಂದೆ ಪಾರ್ಕ್ ಒಳಗೆ ಮೂರು ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಸರ್ಕಾರ ಬ್ರೇಕ್ ಹಾಕಿದೆ.
ಹಡ್ಸನ್ ಸರ್ಕಲ್ ನಿಂದ ಸೆಂಟ್ರಲ್ ಲೈಬ್ರೆರಿಯವರೆಗೆ, ಕ್ವೀನ್ಸ್ ರಸ್ತೆಯಿಂದ ಜವಾಹರ್ ಬಾಲ್ ಭವನದವರೆಗೆ ವೆಂಕಟಪ್ಪ ಆರ್ಟ್ ಗ್ಯಾಲರಿಯವರೆಗೆ, ಕಿಂಗ್ಸ್ ರಸ್ತೆಯಿಂದ ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದವರೆಗೆ ವಾಹನ ಸವಾರರಿಗೆ ನಿಷೇಧ ಹೇರಲಾಗಿದೆ.
ಕಬ್ಬನ್ ಪಾರ್ಕ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಜನಜಂಗುಳಿಯಿಂದ ಮತ್ತು ವಾಹನ ಸವಾರರಿಂದ ಮುಕ್ತತೆ ನೀಡಿ ಪ್ರವಾಸಿ ಸ್ನೇಹಿ ರಸ್ತೆಯನ್ನಾಗಿಸಲು ತೋಟಗಾರಿಕೆ ಇಲಾಖೆ ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸಿತ್ತು.
ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಬಿಬಿಎಂಪಿ ಮತ್ತು ಬೆಂಗಳೂರು ನಗರ ಸಂಚಾರಿ ಪೊಲೀಸರು ಈ ಸಂಬಂಧ ಕಳೆದ ಗುರುವಾರ ವಿಧಾನ ಸೌಧದಲ್ಲಿ ಮಾತುಕತೆ ನಡೆಸಿದ ನಂತರ ಪ್ರಸ್ತಾವನೆಯನ್ನು ಸ್ವೀಕರಿಸಲಾಯಿತು. ಈ ತಿಂಗಳ ಎರಡನೇ ಅಥವಾ ಮೂರವೇ ವಾರದಲ್ಲಿ ಈ ಸಂಬಂಧ ಅಧಿಸೂಚನೆ ಹೊರಡಿಸಾಗುತ್ತದೆ.
ಕಬ್ಬನ್ ಪಾರ್ಕ್ ಒಳಗಡೆ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರಗಳನ್ನು ನಿಷೇಧಿಸುವ ನಿಯಮವನ್ನು ಪ್ರತಿ ತಿಂಗಳ ನಾಲ್ಕನೇ ಶನಿವಾರ ಮತ್ತು ಎಲ್ಲಾ ರಾಷ್ಟ್ರೀಯ ರಜಾ ದಿನಗಳಲ್ಲಿ ಜಾರಿಗೆ ತರಲಾಗುತ್ತದೆ. ಪ್ರಸ್ತುತ ಭಾನುವಾರ ಮತ್ತು ಎರಡನೇ ಶನಿವಾರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಸೆಂಟ್ರಲ್ ಲೈಬ್ರೆರಿ ರಸ್ತೆಯನ್ನು ಪ್ರಸ್ತುತ ವಾಹನಗಳನ್ನು ಪಾರ್ಕ್ ಮಾಡಲು ಬಳಸಲಾಗುತ್ತಿದೆ. ಬಹು ಹಂತದ ವಾಹನಗಳ ಪಾರ್ಕಿಂಗ್ ಸೌಲಭ್ಯ ಮುಗಿದ ನಂತರ ಆ ರಸ್ತೆಯಲ್ಲಿ ಕೂಡ ವಾಹನಗಳನ್ನು ಪಾರ್ಕ್ ಮಾಡುವುದನ್ನು ನಿಷೇಧಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.
SCROLL FOR NEXT