ಬೆಂಗಳೂರು: ಅಮಾನತುಗೊಂಡಿರುವ ಕಾಂಗ್ರೆಸ್ ಶಾಸಕ ಜೆ.ಎನ್ ಗಣೇಶ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಜನವರಿ 20 ರಂದು ಬಿಡದಿ ಬಳಿಯ ರೆಸಾರ್ಟ್ ನಲ್ಲಿ ಕಂಪ್ಲಿ ಶಾಸಕ ಜೆಎನ್ ಗಣೇಶ್ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಗಣೇಶ್ ಅವರನ್ನು ಫೆಬ್ರವರಿ 21ರ ವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಇದೇ ವೇಳೆ ಅನಂದ್ ಸಿಂಗ್ ಮತ್ತು ಗಣೇಶ್ ರೆಸಾರ್ಟ್ ನಲ್ಲಿ ಬಡಿದಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿದೆ, ಹರ್ನಿಯ ಸಮಸ್ಯೆಯಿಂದ ಬಳಲುತ್ತಿದ್ದ ಗಣೇಶ್ ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಈಗ ಸಮಸ್ಯೆ ಕಡಿಮೆಯಾಗಿದ್ದು ಆಸ್ಪತ್ರೆಯಿಂದ ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದು ಹಿರಿಯ ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.