ರಾಜ್ಯ

ಮೈಸೂರು ದೇಶದ ಮೂರನೇ ಅತ್ಯಂತ ಸ್ಪಚ್ಛನಗರ

Lingaraj Badiger
ಮೈಸೂರು: ಸತತ ಎರಡು ಬಾರಿ 'ದೇಶದ ನಂ.1 ಸ್ವಚ್ಛ ನಗರಿ' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಾಂಸ್ಕೃತಿಕ ನಗರಿ ಮೈಸೂರು ಈ ಬಾರಿ ದೇಶದ ಮೂರನೇ ಸ್ವಚ್ಛ ನಗರ ಎಂಬ ಗೌರವಕ್ಕೆ ಪಾತ್ರವಾಗಿದೆ.
ಇಂದು ದೆಹಲಿಯಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣೆ - 2019 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇಂದೋರ್ ಸತತ ಮೂರನೇ ಬಾರಿ ಮೊದಲ ಸ್ಥಾನ ಪಡೆದುಕೊಂಡಿದೆ. ಅಂಬಿಕಾಪೂರ್ ಎರಡನೇ ಸ್ಥಾನದಲ್ಲಿದ್ದು, ಮೈಸೂರು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
2015 ಮತ್ತು 2016ರಲ್ಲಿ ಸತತ ಎರಡು ಬಾರಿ ಮೊದಲ ಸ್ಥಾನ ಪಡೆದಿದ್ದ ಮೈಸೂರು ಕಳೆದ ವರ್ಷ ಐದನೇ ಸ್ಥಾನಕ್ಕೆ ಕುಸಿದಿತ್ತು. 
ಭಾರತದ ಟಾಪ್ 10 ಸ್ವಚ್ಛ ನಗರಿಗಳ ಪಟ್ಟಿ
1. ಇಂದೋರ್
2. ಅಂಬಿಕಾಪುರ್
3. ಮೈಸೂರು
4. ಉಜ್ಜೈನಿ
5. ನವದೆಹಲಿ
6. ಅಹಮದಾಬಾದ್
7. ನವಿ ಮುಂಬೈ
8. ತಿರುಪತಿ
9. ರಾಜ್ ಕೋಟ್
10. ದೇವಾಸ್
SCROLL FOR NEXT