ರಾಜ್ಯ

ಸರ್ಕಾರಿ ಆಸ್ಪತ್ರೆಗಳ ಆದಾಯ ವೃದ್ದಿ: 3 ತಿಂಗಳಲ್ಲಿ 108 ಕೋಟಿ ರೂ ಗಳಿಕೆ!

Raghavendra Adiga
ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರಿ ಆಸ್ಪತ್ರೆಗಳು ಮೂರು ತಿಂಗಳಿನಲ್ಲಿ ರೂ. 108 ಕೋಟಿ ಆದಾಯವನ್ನು ಸೃಷ್ಟಿಸಿವೆ. ಆಯುಷ್ಮಾನ್  ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ ಈ ಆಸ್ಪತ್ರೆಗಳು ಈ ವರ್ಷದ ಅಂತ್ಯದ ವೇಳೆಗೆ 500 ಕೋಟಿ ರೂ. ಆದಾಯ ಸೃಷ್ಟಿಸಬೇಕು ಎಂಬ ಗುರಿ ನಿಡಲಾಗಿದೆ.
ಆರೋಗ್ಯ ಸಚಿವ ಶಿವಾನಂದ ಪಾಟೀಲ್ಮಾತನಾಡಿ . "ಆರೋಗ್ಯ ಇಲಾಖೆ ತನ್ನ ಸ್ವಂತ ಆದಾಯವನ್ನು ಸೃಷ್ಟಿಸಬಹುದು ಮತ್ತು ನಾವು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಯಾವುದೇ ಹಣವನ್ನು ಪಡೆಯಬೇಕಾಗಿಲ್ಲ. ಆಸ್ಪತ್ರೆಗಳು ತಮ್ಮ ಗುರಿಗಳನ್ನು ಪೂರೈಸುತ್ತಿವೆ " ಎಂದರು. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳು ಸುಸಜ್ಜಿತವಾಗಿದ್ದು ಹೆಚ್ಚಿನ ಜನರು ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ಇಲ್ಲಿಗೆ ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ರಾಜ್ಯದ ಆರೋಗ್ಯ ಕರ್ನಾಟಕ ಯೋಜನೆಯಡಿ ನೊಂದಾಯಿತವಾಗಿರುವ ತಾಲೂಕು, ಜಿಲ್ಲಾಸ್ಪತ್ರೆಗಳು ಸೇರಿದಂತೆ 405 ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆದ ದತ್ತಾಂಶವನ್ನು ಬಹಿರಂಗಪಡಿಸಿದ ಅವರು ರಾಜ್ಯದಲ್ಲಿ 19 ಆಸ್ಪತ್ರೆಗಳು ರೂ 1 ಕೋಟಿಗಿಂತ ಹೆಚ್ಚಿನ ಆದಾಯವನ್ನು ಸೃಷ್ಟಿಸಿವೆ  ಎಂದಿದ್ದಾರೆ.  ಇವುಗಳಲ್ಲಿ ಕಿಡ್ವಾಯ್ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ 30.21 ಕೋಟಿ ರೂಪಾಯಿ ಆದಾಯವನ್ನು ಗಳಿಸಿದ್ದರೆ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ 6.31 ಕೋಟಿ ರೂ.ಗಳಿಸಿಕೊಂಡಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಮತ್ತು ವೈದ್ಯ ಸಿಬ್ಬಂದಿಗಳ ಕೊರತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಷ್ಟ್ರೀಯ ಆರೋಗ್ಯ ಮಿಷನ್ ನಲ್ಲಿ ಸಾಕಷ್ಟು ಹಣವಿದೆ.ತುರ್ತು ಪರಿಸ್ಥಿತಿಗಳಲ್ಲಿ ಔಷಧಿಗಳನ್ನು ಖರೀದಿಸಲು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಸ್ವತಂತ್ರ ನೀಡಲಾಗಿದೆ.ಸರ್ಕಾರಿ ಆಸ್ಪತ್ರೆಗಳು ಮೂಲಸೌಕರ್ಯ ಮತ್ತು ಮಾನವಶಕ್ತಿಯನ್ನು ಹೊಂದಿದ್ದು, 619 ಶಾಶ್ವತ ವೈದ್ಯರು, 1,343 ಸಾಮಾನ್ಯ ವೈದ್ಯರು ಒಪ್ಪಂದದ ಆಧಾರದ ಮೇಲೆ ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೇವೆಯಲ್ಲಿದ್ದಾರೆ. ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ 458 ಪರಿಣಿತರನ್ನು ನೇಮಿಸಿಕೊಳ್ಳಲಾಗಿದೆ.ಎಂದು ಅವರು ಹೇಳಿದರು. "
ಚಿಕಿತ್ಸಾ ದರಗಳ ಪಟ್ಟಿ ಹಾಕಿ ಇಲ್ಲವೇ ಕ್ರಮ ಎದುರಿಸಿ!
ಯಾವುದೇ ಆಸ್ಪತ್ರೆಗಳಲ್ಲಿ ನೀಡಲಾಗುವ ಚಿಕಿತ್ಸೆಗಳ ದರಪಟ್ಟಿಯನ್ನು ಪ್ರದರ್ಶಿಸದೆ ಹೋದಲ್ಲಿ ಅಂತಹಾ ಆಸ್ಪತ್ರೆಗಳ ವಿರುದ್ಧ "ಕಟ್ಟುನಿಟ್ಟಿನ ಕ್ರಮ"  ಜರುಗಿಸಲಾಗುವುದು ಎಂದು ಖಾಸಗಿ ಆಸ್ಪತ್ರೆಗಳಿಗೆ ಸಚಿವರು ಎಚ್ಚರಿಸಿದ್ದಾರೆ.2019 ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮದ  ಅನ್ವಯ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ನಿಗದಿಪಡಿಸಿದ ದರಗಳ ಪಟ್ಟಿಯನ್ನು ಪ್ರದರ್ಶಿಸುವುದು ಕಡ್ಡಾಯ. ಆದರೆ ಹೆಚ್ಚಿನ ಸಂಖ್ಯೆಯ ಆಸ್ಪತ್ರೆಗಳು ಇದನ್ನು ಅನುಸರಿಸುವುದಿಲ್ಲ.
SCROLL FOR NEXT