ರಾಜ್ಯ

ಎಂಎಚ್​ಆರ್​ಡಿ ಸೂಚ್ಯಾಂಕ: ಗ್ರೇಡ್ 3 ಪಟ್ಟಿಯಲ್ಲಿ ಕರ್ನಾಟಕ

Raghavendra Adiga
ಬೆಂಗಳೂರು: ರಾಜ್ಯದ ಶೈಕ್ಷಣಿಕ ಅಭಿವೃದ್ದಿಗಾಗಿ ಕೇಂದ್ರ ಸರ್ಕಾರ ನೀಡುವ ನಿಧಿಯನ್ನು ಬಳಸಿಕೊಳ್ಳುವಲ್ಲಿ ಕರ್ನಾಟಕ ದೇಶದ ಇತರೆ ರಾಜ್ಯಗಳಿಗಿಂತ ಹಿಂದೆ ಬಿದ್ದಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿರುವ ವಿಶೇಷ ಕಾರ್ಯಕ್ಷಮತೆಯ ಶ್ರೇಣೀಕೃತ ಸೂಚ್ಯಂಕ (ಪಿಜಿಐ) ನಲ್ಲಿ ರಾಜ್ಯ ಮೂರನೇ ದರ್ಜೆಯಲ್ಲಿ ಗುರುತಿಸಿಕೊಂಡಿದೆ.
ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯು ಈಕ್ವಿಟಿ, ಮೂಲಭೂತ ಸೌಕರ್ಯ, ಪ್ರವೇಶ, ಕಲಿಕೆ ಫಲಿತಾಂಶಗಳು ಮತ್ತು ಗುಣಮಟ್ಟದ ವಿಷಯದಲ್ಲಿ ಉತ್ತಮ ಮಟ್ಟದಲ್ಲಿದ್ದರೂ, ಶಿಕ್ಷಣ ವ್ಯವಸ್ಥೆಗಳ ಆಡಳಿತ ಪ್ರಕ್ರಿಯೆಗಳಲ್ಲಿ ರಾಜ್ಯ ಹಿಂದೆ ಬಿದ್ದಿದೆ.ಅಲ್ಲದೆ ಕೇಂದ್ರದ ನಿಧಿಯನ್ನು ಸರಿಯಾದ ಬಗೆಯಲ್ಲಿ ವಿನಿಯೋಜಿಸುವುದಕ್ಕೆ ಸಹ ನಿಧಾನಗತಿಯನ್ನು ತಳೆದಿದೆ.
ವರದಿಯಲ್ಲಿ ಉಲ್ಲೇಖಿಸಿರುವಂತೆ, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ನೈಜ ಫಲಾನುಭವಿಗಳಿಗೆ ಕೇಂದ್ರದ ಪಾಲನ್ನು ನೀಡುತ್ತಿಲ್ಲ. ವಿವಿಧ ಯೋಜನೆಗಳಿಗೆ ಕೇಂದ್ರ ಸರ್ಕಾರದ ನಿಧಿಯನ್ನು ಬಳಸಿಕೊಳ್ಳುವುದಕ್ಕೆ ವಿಳಂಬ ಮಾಡುತ್ತಿದೆ.
ಎಂಎಚ್ ಆರ್ ಡಿ ವರದಿಯ ಮುಖ್ಯಾಂಶಗಳು
ಗ್ರೇಡ್  1 ಅಡಿಯಲ್ಲಿ ಚಂಡೀಗಢ, ಗುಜರಾತ್ ಮತ್ತು ಕೇರಳ
ಗ್ರೇಡ್ 2 ಅಡಿಯಲ್ಲಿ ದಾದರ್ ನಗರ್ ಹವೇಲಿ ರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ತಮಿಳುನಾಡು 
ಗ್ರೇಡ್ 3ನಲ್ಲಿ ಆಂಧ್ರ ಪ್ರದೇಶ, ಛತ್ತೀಸ್ ಗಡ, , ಅಸ್ಸಾಂ, ದೆಹಲಿ, ಗೋವಾ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಮತ್ತು ಉತ್ತರಾಖಂಡ್
SCROLL FOR NEXT