ರಾಜ್ಯ

ಬೇಸಿಗೆಯ ಬಿಸಿಲಿನ ಜೊತೆ ಏರುತ್ತಿದೆ ಚುನಾವಣಾ ಕಾವು

Sumana Upadhyaya
ಬೆಂಗಳೂರು: ಮಾರ್ಚ್ ತಿಂಗಳ ಮಧ್ಯಭಾಗವಿದು. ಬೇಸಿಗೆ ನೆತ್ತಿ ಸುಡುತ್ತಿದೆ. ಇತ್ತ ರಾಜಕೀಯ ಬಿಸಿ ಕೂಡ ಏರುತ್ತಿದೆ. ಏಪ್ರಿಲ್ ತಿಂಗಳಲ್ಲಿ ಇನ್ನೂ ಸೆಖೆಯ ಮಧ್ಯೆ ಚುನಾವಣಾ ಕಾವು ರಂಗೇರಲಿದೆ.
ಏಪ್ರಿಲ್ ತಿಂಗಳಲ್ಲಿ ಈ ತಿಂಗಳಿಗಿಂತಲೂ ಹೆಚ್ಚು ಕಾವು ಏರಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು. ಉತ್ತರ ಕರ್ನಾಟಕದಲ್ಲಿ ಈಗಾಗಲೇ ಉಷ್ಣಾಂಶ 36ರಿಂದ 40 ಡಿಗ್ರಿಗೆ ಏರಿಕೆಯಾಗಿದ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕೂಡ ಇದು ಕಡಿಮೆಯಿಲ್ಲ.ಹೈದರಾಬಾದ್ ಕರ್ನಾಟಕದಲ್ಲಿ ಇನ್ನೂ ಅಧಿಕ.
ಸರಾಸರಿಗಿಂತ ಏಪ್ರಿಲ್ ನಲ್ಲಿ 4 ಡಿಗ್ರಿಯಷ್ಟು ಉಷ್ಣತೆ ಹೆಚ್ಚಾಗಲಿದೆ. ಈ ಬೇಸಿಗೆ ತುಂಬಾ ಸೆಖೆ ಇರಲಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ(ಕೆಎಸ್ ಎನ್ ಡಿಎಂಸಿ) ಶ್ರೀನಿವಾಸ ರೆಡ್ಡಿ.
ಕೆಲ ವರ್ಷಗಳ ಹಿಂದೆ ವಾತಾವರಣದಲ್ಲಿ ಉಷ್ಣತೆ ಮಧ್ಯಾಹ್ನ 12 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಉಷ್ಣಾಂಶ ಅಧಿಕವಾಗಿರುತ್ತಿತ್ತು. ಅದೀಗ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಇರುತ್ತದೆ ಎನ್ನುತ್ತಾರೆ ಕೆಎಸ್ ಎನ್ ಡಿಎಂಸಿ ಯೋಜನೆ ವಿಜ್ಞಾನಿ ಮತ್ತು ಹವಾಮಾನತಜ್ಞ ಸುನಿಲ್ ಎಂ ಗಾವಸ್ಕರ್.
SCROLL FOR NEXT