ರಾಜ್ಯ

ಎರಡು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದರೂ ದಂಡ ಕಟ್ಟದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ!

Nagaraja AB
ಬೆಂಗಳೂರು: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬಳಸುತ್ತಿರುವ ರೇಂಜ್ ರೋವರ್ ಕಾರಿನಿಂದ ಫೆಬ್ರವರಿ ತಿಂಗಳಲ್ಲಿ ಎರಡು ಬಾರಿ ಸಂಚಾರಿ ನಿಯಮ ಉಲ್ಲಂಘಿಸಿರುವುದು  ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈ ಸಂಬಂಧ ಕಾರು ನೋಂದಣಿಯಾಗಿರುವ  ಕಸ್ತೂರಿ ಮೀಡಿಯಾ ಕಂಪನಿಗೆ ನೋಟಿಸ್  ಕಳುಹಿಸಲಾಗಿದೆ.
ಫೆಬ್ರವರಿ 10 ರಂದು ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಚಾಲನೆ ವೇಳೆಯಲ್ಲಿ ಚಾಲಕ ಮೊಬೈಲ್ ಪೋನ್ ನಲ್ಲಿ ಮಾತನಾಡಿರುವುದು ಒಂದು ಅಪರಾಧವಾದರೆ, ಫೆಬ್ರವರಿ 22 ರಲ್ಲಿ ಬಸವೇಶ್ವರ ವೃತ್ತದಲ್ಲಿ ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದ ಹಿನ್ನೆಲೆಯಲ್ಲಿ 300 ರೂ. ದಂಡ ವಿಧಿಸಲಾಗಿದೆ.
ಈ ವಿಳಾಸಕ್ಕೆ ಎರಡು ನೋಟಿಸ್ ಗಳನ್ನು ಕಳುಹಿಸಲಾಗಿದೆ. ಆದಾಗ್ಯೂ, ಆ ಕಂಪನಿಯಿಂದ 600 ರೂ. ದಂಡ ಇನ್ನೂ ಪಾವತಿಯಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕುಮಾರಸ್ವಾಮಿ ಸರ್ಕಾರಿ ಕಾರನ್ನು ಬಳಸುತ್ತಿಲ್ಲ, ಖಾಸಗಿ ಕಾರನ್ನೇ ಬಳಸುತ್ತಿದ್ದಾರೆ. ಒಂದು ವೇಳೆ ನಿಗದಿತ ವೇಳೆಗೆ ದಂಡ ಕಟ್ಟದಿದಲ್ಲೀ ಕಾರನ್ನು ಎಲ್ಲರಿಗೂ ಕಾಣುವ ರೀತಿಯಲ್ಲಿ ನಿಲ್ಲಿಸಿ ದಂಡ ಸಂಗ್ರಹಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಈ ರೇಂಜ್ ರೋವರ್ ಕಾರು ಮುಖ್ಯಮಂತ್ರಿಗೆ ಸೇರಿದ್ದು, ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅವರೇ ಸ್ವಯಂ ಪ್ರೇರಿತರಾಗಿ ದಂಡ ಪಾವತಿಸದಿದ್ದಲ್ಲೀ ಶೀಘ್ರದಲ್ಲಿಯೇ ನಾವೇ ದಂಡ ವಸೂಲಿ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ
SCROLL FOR NEXT