ರಾಜ್ಯ

ವಿಶೇಷಚೇತನರಿಗೆ ಮತದಾನಕ್ಕೆ ವಿಶೇಷ ವ್ಯವಸ್ಥೆ ಮಾಡಿರುವ ಚುನಾವಣಾ ಆಯೋಗ

Sumana Upadhyaya
ಬೆಂಗಳೂರು: ದೈಹಿಕ ನ್ಯೂನತೆ ಹೊಂದಿರುವ ಸುಮಾರು 4 ಲಕ್ಷ ಮತದಾರರು ದಾಖಲಾತಿ ಹೊಂದಿದ್ದು ಅವರಿಗೆ ಸುಲಭವಾಗಿ ಮತ ಚಲಾಯಿಸಲು ಚುನಾವಣಾ ಆಯೋಗ ಸಕಲ ವ್ಯವಸ್ಥೆ ಮಾಡಿದೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ದೃಷ್ಟಿದೋಷ ಹೊಂದಿರುವ ಮತದಾರರಿಗೆ ಬ್ರೈಲ್ಲೆ ಆಧಾರಿತ ಮತದಾನ ಚೀಟಿ ಮತ್ತು ಗೈಡ್ ಗಳನ್ನು ನೀಡಲಾಗುತ್ತದೆ. ದೃಷ್ಟಿಹೀನರಿಗೆ ಬ್ರೈಲ್ಲೆಯಲ್ಲಿ ಬರೆದ ಅಭ್ಯರ್ಥಿಗಳ ಪಟ್ಟಿಯನ್ನು ನೀಡಲಾಗುತ್ತದೆ. ಬ್ರೈಲ್ಲೆ ಲಿಪಿಯಲ್ಲಿ ಅಭ್ಯರ್ಥಿಗಳ ಚಿಹ್ನೆ ಕೂಡ ಇರುತ್ತದೆ.
ದೈಹಿಕ ವಿಶೇಷಚೇಚನರಿಗೆ ಮತದಾನ ಕೇಂದ್ರಕ್ಕೆ ಬರಲು ವಿಶೇಷ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತದೆ. ಇವರನ್ನು ಮನೆಗಳಿಂದ ಮತದಾನ ಕೇಂದ್ರಕ್ಕೆ ಕರೆದುಕೊಂಡು ಬಂದು ಮತ್ತೆ ಮನೆಗೆ ತಲುಪಿಸುವ ವ್ಯವಸ್ಥೆಯಿದೆ.
ಸೌಕರ್ಯಗಳಿಲ್ಲದೆ ಹಿಂದೆಲ್ಲಾ ಕಡಿಮೆ ವಿಕಲಚೇತನರು ಮತದಾನಕ್ಕೆ ಬರುತ್ತಿದ್ದರು. ಈ ನಿಟ್ಟಿನಲ್ಲಿ ವಿಶೇಷಚೇತನರನ್ನು ಸಹ ಮತಗಟ್ಟೆಗಳಿಗೆ ಸೆಳೆಯಲು ಇತ್ತೀಚಿನ ವರ್ಷಗಳಲ್ಲಿ ವಿಶೇಷ ಗಮನ ಹರಿಸಲಾಗುತ್ತಿದೆ ಎಂದರು.
SCROLL FOR NEXT