ಸಂಗ್ರಹ ಚಿತ್ರ 
ರಾಜ್ಯ

ಗದಗ: ಅರ್ಥಶಾಸ್ತ್ರದ ಉತ್ತರ ಪತ್ರಿಕೇಲಿ ಪಬ್‍ಜಿ ಆಡೋದು ಹೇಗೆಂದು ಬರೆದ ಪಿಯು ವಿದ್ಯಾರ್ಥಿ!

ಪಬ್‍ಜಿ ಈ ಆನ್ ಲೈನ್ ಶೂಟಿಂಗ್ ಗೇಮ್ ಯುವಕರನ್ನು ಎಷ್ಟರ ಮಟ್ಟಿಗೆ ಆಕರ್ಷಣೆಗೀಡುಮಾಡಿದೆ ಎಂದರೆ ಪ್ರಥಮ ಪಿಯು ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಪಬ್‍ಜಿ ಆಡುವುದು ಹೇಗೆಂದು ವಿವರಿಸಿ ಬರೆದಿದ್ದಾನೆ!

ಗದಗ: ಪಬ್‍ಜಿ ಈ ಆನ್ ಲೈನ್ ಶೂಟಿಂಗ್ ಗೇಮ್ ಯುವಕರನ್ನು ಎಷ್ಟರ ಮಟ್ಟಿಗೆ ಆಕರ್ಷಣೆಗೀಡುಮಾಡಿದೆ ಎಂದರೆ ಪ್ರಥಮ ಪಿಯು ವಿದ್ಯಾರ್ಥಿಯೊಬ್ಬ ಉತ್ತರ ಪತ್ರಿಕೆಯಲ್ಲಿ ಪಬ್‍ಜಿ ಆಡುವುದು ಹೇಗೆಂದು ವಿವರಿಸಿ ಬರೆದಿದ್ದಾನೆ! ನಿಮಗಿದನ್ನು ಕೇಳಿ ಅಚ್ಚರಿಯಾಗಬಹುದು ಆದರೂ ಇದು ಸತ್ಯ. 
ಜಿಲ್ಲೆಯ ವರುಣ್ (ಹೆಸರು ಬದಲಿಸಿದೆ) ಎಂಬ ಪ್ರಥಮ ಪಿಯು ವಿದ್ಯಾರ್ಥಿ ತನ್ನ ಅರ್ಥಶಾಸ್ತ್ರದ ಉತ್ತರ ಪತ್ರಿಕೆಯಲ್ಲಿ ಕೇವಲ ಪಬ್‍ಜಿ  ಕುರಿತಂತೆ ವಿವರಿಸಿದ್ದಾನೆ. ಫಲಿತಾಂಶ ಇದೀಗ ಅವನನ್ನು ಶಿಕ್ಷಕರು ಅನುತ್ತೀರ್ಣಗೊಳಿಸಿದ್ದಾರೆ. ವಿಪರ್ಯಾಸವೆಂದರೆ ಇದೇ ವಿದ್ಯಾರ್ಥಿ ಕಳೆದ ಸಾಲಿನ ಎಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶೇಷ  ಅರ್ಹತೆ (ಡಿಸ್ಟಿಂಕ್ಷನ್) ನಲ್ಲಿ ಉತ್ತೀರ್ಣನಾಗಿದ್ದ.  ಆದರೆ ಯಾವಾಗ ಮಾನ್ ಲೈನ್ ಮೊಬೈಲ್ ಗೇಮ್ ನ ಚಟಕ್ಕೆ ಬಲಿಯಾದನೋ ಅಂದಿನಿಂದ ವಿದ್ಯಾಭ್ಯಾಸದ ಆಸಕ್ತಿ ಅವನಲ್ಲಿ ಕಮರಿತ್ತು.
ವರುಣ್ ತಾನು ಆಟದಲ್ಲೇ ಮುಳುಇಗಿರುವುದಾಗಿ ಒಪ್ಪಿಕೊಂಡಿದ್ದಾನೆ.ಆಟದ ನೆಪದಲ್ಲಿ ಈ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯು ಸಹ ಮರೆತುಹೋಗಿದೆ. ವಿದ್ಯಾರ್ಥಿಯ ಪೋಷಕರು ಆತ ಸದಾಕಾಲ ಮೊಬೈಲ್ ನಲ್ಲಿ ನಿರತವಾಗಿದ್ದದ್ದನ್ನು ಕಂಡರೂ ಆತ ತನ್ನ ಸ್ನೇಹಿತ, ಸಸಪಾಠಿಯೊಡನೆ ಸಂಭಾಷಾಣೆ ನಡೆಸಿದ್ದನೆಂದು ನಂಬಿದ್ದರು.
"ನಾನು ಉತ್ತಮವಾಗಿ ಓದುವ ವಿದ್ಯಾರ್ಥಿ, ಆದರೆ ಪಬ್‍ಜಿ ಆಕರ್ಷಕವಾದ ಆಟ, ನನ್ನನ್ನು ಸೆಳೆಯಿತು. ನಾನು ಅದರ ಚಟಕ್ಕೆ ಬಿದ್ದೆ. ಎಷ್ಟೆಂದರೆ ನಾನು ಕೆಲವೊಮ್ಮೆ ನನ್ನ ತರಗತಿಗೆ ಗೈರಾಗಿ ತೋಟದಲ್ಲಿ ಕುಳಿತು ಈ ಆಟವನ್ನು ಆಡುತ್ತಿದ್ದೆ." ವರುಣ್ ಹೇಳಿದ್ದಾನೆ. ಆತ ಪರೀಕ್ಷೆಗೆ ಹದಿನೈದು ದಿನಗಳಿರುವಾಗ ಪಬ್‍ಜಿ  ಆಡುವುದನ್ನು ಬಿಡಲು ತೀರ್ಮಾನಿಸಿದ್ದನು. ಆದರೆ ಆತನಿಗೆ ಓದುವುದರಲ್ಲಿ ಆಸಕ್ತಿ , ಏಕಾಗೃತೆ ಸಾಧಿಸಲು ಸಾಧ್ಯವಾಗಲಿಲ್ಲ.
"ನನಗೆ ನನ್ನ ಬಗ್ಗೆಯೇ ಕೋಪವಿದೆ. ಉತ್ತರ ಪತ್ರಿಕೆಯಲ್ಲಿ ಪಬ್‍ಜಿ  ಬಗ್ಗೆ ಬರೆದಿದ್ದೇನೆ. ಈಗ ನನ್ನ ಪೋಷಕರು ಮೊಬೈಲ್ ಅನ್ನು  ಕಿತ್ತಿಟ್ಟುಕೊಂಡಿದ್ದಾರೆ. ದರೆ ಆಟದ ಚಿತ್ರಣಗಳು ನನ್ನ ಮನಸ್ಸಿನಲ್ಲಿ ಮುಂದುವರೆದಿದೆ. ಒಂದು ಆಟ ಎಷ್ಟು ಅಪಾಯಕಾರಿ ಎಂದು ನಾನು ತಿಳಿದುಕೊಂಡಿದ್ದೇನೆ. " ಜೂನ್ ನಲ್ಲಿ ನಡೆಯಲಿರುವ ರಿ ಎಕ್ಸಾಮ್ ನಲ್ಲಿ ಮತ್ತೆ ಈ ವಿಷಯದ ಪತ್ರಿಕೆಗೆ ಉತ್ತರಿಸಲು ವರುಣ್ ಮುಂದಾಗಿದ್ದಾನೆ. ಗದಗದ ಇನ್ನೊಂದು ಕಾಲೇಜಿನ ಪ್ರಾಂಶುಪಾಲರಾಗಿರುವ ವರುಣ್ ತಂದೆ ತನ್ನ ಮಗನ ಈ ಚಟದಿಂದ ನಿಜಕ್ಕೂ ಆಘಾತವಾಗಿದೆ ಎಂದು ಹೇಳಿದ್ದಾರೆ.
ವರುಣ್ ಅವರ ತಂದೆ ಯಾವಾಗಲೂ ತನ್ನ ಕಾಲೇಜಿನಲ್ಲಿ ಬೇರೆ ವಿದ್ಯಾರ್ಥಿಗಳಿಗೆ ಆನ್ ಲೈನ್ ಗೇಮ್, ಬ್ಲೂವೇಲ್ ಚಟದ ಬಗ್ಗೆ ಸಲಹೆ ನೀಡುತ್ತಿದ್ದರು. ಬ್ಲೂ ವೇಲ್ ಚಾಲೆಂಜ್ ಮತ್ತು ಪಬ್‍ಜಿ  ಟಗಳಿಂದ ತಮ್ಮನ್ನು ತಾವು ದೂರವಿರಿಸಬೇಕೆಂದು ವಿದ್ಯಾರ್ಥಿಗಳಿಗೆ ಅವರು ಎಂದಿಗೂ ಮನವರಿಕೆ ಮಾಡಿಸುತ್ತಿದ್ದರು.  ಆದರೆ ವಿದ್ಯಾರ್ಥಿಗಳು ತಮ್ಮ ಕೋಣೆಗಳಲ್ಲಿ ಕುಳಿತು ಓದುವುದಕ್ಕೆ ಯಾವ ಅಭ್ಯಂತರವಿಲ್ಲ ಎಂದು ಅವರು ಭಾವಿಸಿದ್ದರು.
"ಸಾಮಾನ್ಯವಾಗಿ ಉತ್ತರಗಳನ್ನು ತಿಳಿಯದ ವಿದ್ಯಾರ್ಥಿಗಳು ಚಲನಚಿತ್ರ ಗೀತೆಗಳನ್ನು ಅಥವಾ ಪ್ರಸಿದ್ಧ ಚಲನಚಿತ್ರ ಸಂಭಾಷಣೆಗಳನ್ನು ಬರೆಯುತ್ತಾರೆ. ಆದರೆ ಈ ಹುಡುಗನು ಆಟದ ಬಗ್ಗೆ ಎಲ್ಲವನ್ನೂ ಬರೆದಿದ್ದಾನೆ, ಅದನ್ನು ಹೇಗೆ ಆಡಬೇಕೆಂಬುದನ್ನು ಡೌನ್ಲೋಡ್ ಮಾಡಲು ಹಂತಗಳಿಂದ ಪ್ರಾರಂಭಿಸಿ. ಪ್ರತಿ  ಹಂತವನ್ನೂ ವಿವರಿಸಿದ್ದಾನೆ. ಇದು ಆತನಿಗೆ ಆಟದ ಮೇಲಿರುವ ಪಾಂಡಿತ್ಯವನ್ನು ತೋರಿಸುತ್ತದೆ.  ನಾನು ಈ ಪತ್ರಿಕೆಯನ್ನು ನಮ್ಮ ಪ್ರಾಂಶುಪಾಲರಿಗೆ, ವಿದ್ಯಾರ್ಥಿಯ ಪೊಷಕರಿಗೆ ತೋರಿಸಿದ್ದೇವೆ. ಅವರಿಗೆ ಮಗನ ವ್ಯಸನದ ಕುರಿತು ಮನವರಿಕೆ ಮಾಡಿದ್ದೇವೆ." ವರುಣ್  ಅರ್ಥಶಾಸ್ತ್ರದ ಉತರ ಪತ್ರಿಕೆ ಮೌಲ್ಯಮಾಪನ ಮಾಡಿದ ಶಿಕ್ಷಕರು ಹೇಳೀದ್ದಾರೆ.
"ಹುಡುಗನು ಚಾರ್ಟರ್ಡ್ ಅಕೌಂಟೆಂಟ್ ಆಗಲು ಬಯಸುತ್ತಾನೆ. ಇತರೆ ವಿಷಯಗಳಲ್ಲಿ ಸಹ ಅವನು ಕಡಿಮೆ ಬರೆದಿದ್ದು ಪಾಸ್ ಆಗಬಹುದಾದ ಅಂಕ ಪಡೆಇದ್ದಾನೆ. ಅರ್ಥಶಾಸ್ತ್ರದಲ್ಲಿ,  ಮಾತ್ರ ಆತ ಆಟದ ವಿವರವನ್ನಷ್ಟೇ ನೀಡಿದ್ದಾನೆ. ಪೋಷಕರು ಅವನನ್ನು ವೈದ್ಯಕೀಯ ಸಮಾಲೋಚನೆಗೆ ಕರೆದೊಯ್ಯಲಿದ್ದಾರೆ"ವಾಣಿಜ್ಯ ವಿಭಾಗದ ಒಬ್ಬ ಶಿಕ್ಷಕ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

SCROLL FOR NEXT