ರಾಜ್ಯ

ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ; ಆರೋಪ, ಪ್ರತ್ಯಾರೋಪಗಳ ಸುರಿಮಳೆ

Sumana Upadhyaya
ಹುಬ್ಬಳ್ಳಿ: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಬೀಳಲು ಕಟ್ಟಡ ಮಾಲೀಕರು ಕಾರಣ ಎಂದು ಹೇಳಲಾಗುತ್ತಿದ್ದರೂ ಕೂಡ ಕಟ್ಟಡ ನಿರ್ಮಿಸುವಾಗ ಕಾನೂನನ್ನು ಸರಿಯಾಗಿ ಪಾಲಿಸಲಾಗಿತ್ತೇ ಎಂಬ ಬಗ್ಗೆ ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಅಧಿಕಾರಿಗಳಿಗೆ ಸಹ ಈ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.
ಕಟ್ಟಡ ಕುಸಿದುಬಿದ್ದ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಅದ ಕಾನೂನು ಸ್ಥಿತಿಗತಿ ಬಗ್ಗೆ ಅರಿವು ಇರಲಿಲ್ಲ. ಇದನ್ನು ಪಾಲಿಕೆಯ ವಲಯ ಆಯುಕ್ತರೇ ಒಪ್ಪಿಕೊಂಡಿದ್ದಾರೆ. ನಗರ ಯೋಜನೆ ಅಧಿಕಾರಿಗಳ ಬಳಿ ಸಹ ಯಾವುದೇ ಮಾಹಿತಿಯಿಲ್ಲ. ದಾಖಲೆಗಳನ್ನು ನೋಡಿದ ಮೇಲಷ್ಟೇ ಕಟ್ಟಡ ನಿರ್ಮಾಣಕ್ಕೆ ಪೂರ್ಣ ಪ್ರಮಾಣಪತ್ರ(ಸಿಸಿ) ನೀಡಿಲ್ಲ, ಕೇವಲ ಭಾಗಶಃ ಪೂರ್ಣ ಪ್ರಮಾಣಪತ್ರ ನೀಡಲಾಗಿದೆ ಎಂಬುದು ಗೊತ್ತಾಗಿದ್ದು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಸಿ ಡಬ್ಲ್ಯು ಶಕಿಲ್ ಹೇಳುವ ಅಹ್ಮದ್ ಹೇಳುವ ಪ್ರಕಾರ, ನಿರ್ಮಾಣ ಹಂತದಲ್ಲಿರುವ ಕಟ್ಟಡಕ್ಕೆ ಭಾಗಶಃ ಪೂರ್ಣ ಪ್ರಮಾಣಪತ್ರ ನೀಡುವ ಅವಕಾಶವಿದೆ. ಇದರಡಿ, ಬೇಸ್ ಮೆಂಟ್ ಮತ್ತು ಕೆಳಹಂತದ ಮಹಡಿಗೆ ಮಾತ್ರ ಪೂರ್ಣ ಪ್ರಮಾಣಪತ್ರ ನೀಡಲಾಗುತ್ತದೆಯೇ ಹೊರತು ಮೊದಲ ಮತ್ತು ಎರಡನೇ ಮಹಡಿಗಲ್ಲ ಎಂದರು.
SCROLL FOR NEXT