ರಾಜ್ಯ

ಕುಶಾಲನಗರ: ಭಾರೀ ಪ್ರಮಾಣದ ಸ್ಫೋಟಕ ವಶ, ಐವರ ಬಂಧನ

Shilpa D
ಮಡಿಕೇರಿ: ಐವರು ಆರೋಪಿಗಳನ್ನು ಬಂಧಿಸಿರುವ ಕುಶಾಲನಗರ ಪೊಲೀಸರು ಭಾರೀ ಪ್ರಮಾಣದ ಸ್ಫೋಟಕಗಳನ್ನು ವಶ ಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕುಶಾಲನಗರ ಗ್ರಾಮೀಣ ಪೊಲೀಸರು ಸುಂದರನಗರದ ಮಂಜು ಎಂಬಾತನ ಮನೆಯಲ್ಲಿ 21 ಎಲೆಕ್ಟ್ರಿಕಲ್ ಡಿಟೋನೇಟರ್ 200 ನಾನ್ ಎಲೆಕ್ಟ್ರಿಕಲ್ ಡಿಟೋನೇಟರ್ 239  ಅಮೋನಿಯಂ ನೈಟ್ರೇಟ್ ಟ್ಯೂಬ್ ಹಾಗೂ 5 ಕೆಜಿ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ವಶ ಪಡಿಸಿಕೊಂಡಿದ್ದಾರೆ. 
ಇದರ ಜೊತೆಗೆ ಸುಂದರನಗರದ ಕೂಲಿ ಕಾರ್ಮಿಕ ಆರ್.ಮಂಜು,  ಕುಬೇರ, ಮಣಿ, ರವಿ ಅಲಿಯಾಸ್ ರವಿಚಂದ್ರ, ರಿಜ್ವಾನ್ ಅಹ್ಮನ್  ಎಂಬುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 
SCROLL FOR NEXT