ರಾಜ್ಯ

ಬೆಂಗಳೂರು: ಶೇಕಡಾ 15ರ ರಿಯಾಯಿತಿಯ ಮೆಟ್ರೊ ಸ್ಮಾರ್ಟ್ ಕಾರ್ಡು ಬಳಕೆಯಲ್ಲಿ ಹೆಚ್ಚಳ

Sumana Upadhyaya
ಬೆಂಗಳೂರು: ನಗರದ ಅರ್ಧಕ್ಕೂ ಹೆಚ್ಚು ಮೆಟ್ರೊ ರೈಲು ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡು ಬಳಕೆಯಿಂದ ಪ್ರಯಾಣದರದಲ್ಲಿ ಶೇಕಡಾ 15ರಷ್ಟು ರಿಯಾಯಿತಿ ಪಡೆಯುತ್ತಾರೆ.
ಬೈಯಪ್ಪನಹಳ್ಳಿ-ಮೈಸೂರು ರಸ್ತೆಯ(ನೇರಳೆ ಬಣ್ಣ)ಲ್ಲಿ ವಾರ್ಷಿಕ ಮೆಟ್ರೊ ಸ್ಮಾರ್ಟ್ ಕಾರ್ಡು ಬಳಸುವವರು ಶೇಕಡಾ 58.83ರಷ್ಟಿದ್ದು, ನಾಗಸಂದ್ರ-ಯಲಚೇನಹಳ್ಳಿ(ಹಸಿರು ಮಾರ್ಗ) ದಲ್ಲಿ ಶೇಕಡಾ 51.16ರಷ್ಟು ಪ್ರಯಾಣಿಕರಿದ್ದಾರೆ ಎಂದು ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ಮೆಟ್ರೊ ಕಾರ್ಯನಿರ್ವಹಣೆ, ವ್ಯವಸ್ಥಾಪಕ ವಿಭಾಗದ ಕಾರ್ಯಕಾರಿ ನಿರ್ದೇಶಕ ಎ ಎಸ್ ಶಂಕರ್, ಸ್ಮಾರ್ಟ್ ಕಾರ್ಡಿನಲ್ಲಿ ರಿಯಾಯಿತಿ ನೀಡಿದ್ದರಿಂದ ಪ್ರತಿದಿನ ಸರದಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಪ್ರಯಾಣಿಸುವುದು ತಪ್ಪುತ್ತದೆ ಮತ್ತು ಬೆಲೆ ಅಗ್ಗವಾಗುತ್ತದೆ.
ದೆಹಲಿ ಮೆಟ್ರೊಗಿಂತಲೂ ಇಲ್ಲಿ ಸ್ಮಾರ್ಟ್ ಕಾರ್ಡುಗಳ ಬೆಲೆ ಕಡಿಮೆಯಾಗಿದೆ ಎಂದರು. ಕಳೆದ 15 ವರ್ಷಗಳಿಂದ ದೆಹಲಿ ಮೆಟ್ರೊ ಶೇಕಡಾ 10ರಷ್ಟು ಸ್ಮಾರ್ಟ್ ಕಾರ್ಡುಗಳ ಮೇಲೆ ರಿಯಾಯಿತಿ ನೀಡುತ್ತಿದ್ದರೆ 2017ರಲ್ಲಿ ನಾನ್ ಪೀಕ್ ಅವರ್ ನಲ್ಲಿ ಪ್ರಯಾಣಿಸುವವರಿಗೆ ಸ್ಮಾರ್ಟ್ ಕಾರ್ಡುಗಳ ಬೆಲೆಯಲ್ಲಿ ಶೇಕಡಾ 20ರಷ್ಟು ರಿಯಾಯಿತಿ ತಂದಿತ್ತು. ಶೇಕಡಾ 70ರಷ್ಟು ಪ್ರಯಾಣಿಕರು ಸ್ಮಾರ್ಟ್ ಕಾರ್ಡು ಬಳಕೆದಾರರು ಎಂದು ಹೇಳಿದರು.
SCROLL FOR NEXT