ಬಿಡಿಎ ಆಸ್ತಿ ತೆರಿಗೆ ಡಿಜಿಟಲ್ ಪಾವತಿಗೆ ಇನ್ನೂ ಕೂಡಿ ಬರದ ಮಹೂರ್ತ
ಬೆಂಗಳೂರು: ಬಹುನಿರೀಕ್ಷಿತ ಬಿಡಿಎ ಆಸ್ತಿ ತೆರಿಗೆ ಆನ್ ಲೈನ್ ಪಾವತಿ ಸೌಲಭ್ಯ ಮೇ 1ರಿಂದ ಜಾರಿಗೆ ಬರಲಿದೆ ಎನ್ನಲಾಗಿತ್ತು. ಆದರೆ ಇದೀಗ ಮತ್ತೆ ಹದಿನೈದು ದಿನಗಳ ಕಾಲ ಮುಂದೂಡಿಕೆಯಾಗಿದೆ. ಕಾರಣವೆಂದರೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಈ ವರ್ಷದ ಮಾದರಿಯಂತೆ ಪರಿಣಾಮಕಾರಿ ತೆರಿಗೆ ಹೆಚ್ಚಳದ ಮೊತ್ತವನ್ನು ಮಾಪನ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ ತೆರಿಗೆ ಆನ್ ಲೈನ್ ಪಾವತಿ ಸೌಲಭ್ಯ ಜಾರಿಗೆ ವಿಳಂಬವಾಗಿದೆ.
'ಆಸ್ತಿ ತೆರಿಗೆ ಪಾವತಿಸುವಿಕೆಯು ಮೇ 1 ರಿಂದ ಆನ್ ಲೈನ್ ಆಗಲಿದೆ' ಎಂದು ಸೂಚಿಸುವ ಸ್ಕ್ರೋಲ್ ಪಟ್ಟಿಯೊಂದು ಬಿಡಿಎ ವೆಬ್ ಸೈಟ್ ನ ಮೇಲ್ಭಾಗದಲ್ಲಿ ಒಂದು ತಿಂಗಳಿನಿಂದ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಆ ಪಟ್ಟಿಯಲ್ಲಿ ದಿನಾಂಕವನ್ನು ಕೈಬಿಡಲಾಗಿದ್ದು ಕೇವಲ ಮೇ ಮಾಸದಲ್ಲಿ ಎಂದಷ್ಟೇ ತೋರಿಸಲಾಗುತ್ತಿದೆ.ಇದೇ ವೇಳೆಗೆ ಏಪ್ರಿಲ್ 1 ರಿಂದ ಬಿಡಿಎ ಆನ್ ಲೈನ್ ಅಥವಾ ಆಫ್ ಲೈನ್ ಗಳಲ್ಲಿ ತೆರಿಗೆ ಆಸ್ತಿ ತೆರಿಗೆ ಸಂಗ್ರಹವನ್ನು ನಿಲ್ಲಿಸಿದೆ. ಈ ವರ್ಷದಿಂದ ಆಸ್ತಿ ತೆರಿಗೆ ಸಂಗ್ರಹವನ್ನು ಆನ್ ಲೈನ್ ಮಾಡಲು ಇದು ಉದ್ದೇಶಿಸಿದೆ.
"ಆನ್ ಲೈನ್ ಪ್ರಕ್ರಿಯೆಯು ಮೇ 15ಕ್ಕೆ ಮುನ್ನ ಪ್ರಾರಂಭವಾಗಲಿದೆ, ಇನ್ನು ಹತ್ತು ದಿನಗಳಲ್ಲೇ ನಾವಿದನ್ನು ಪ್ರಾರಂಭಿಸಲಿದ್ದೇವೆ, ಆದರೆ ಅಂತಿಮ ಗಡುವಾಗಿ ಹದಿನೈದು ದಿನಗಳೆಂದು ಗುರಿ ಹಾಕಿಕೊಂಡಿದ್ದೇವೆ"ಬಿಎಡಿಎ ಅಧಿಕಾರಿಯೊಬ್ಬರುಪತ್ರಿಕೆಗೆ ತಿಳಿಸಿದ್ದಾರೆ.
ವಿಳಂಬದ ಹಿಂದಿನ ಕಾರಣ ಕೇಳಿದಾಗ ಹಲವು ಬಿಡಿಎ ಅಧಿಕಾರಿಗಳು ಚುನವಣಾ ಕರ್ತವ್ಯಕ್ಕೆ ತೆರ್ಳಿದ್ದರು ಎಂದು ವಿವರಿಸಿದರು. ಆಸ್ತಿ ಹೊಂದಿರುವವರು ಪಾವತಿಸಬೇಕಾದ ಪರಿಷ್ಕೃತ ಆಸ್ತಿ ತೆರಿಗೆ ಲೆಕ್ಕಾಚಾರ ಮಾಡಲು ಸಾಕಷ್ಟು ಸಮಯದ ಕೊರತೆ ಇದೆ. ಮಾರ್ಚ್ 2019 ರವರೆಗೆ ನಮ್ಮ ಪರವಾಗಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಿದ ಬ್ಯಾಂಕುಗಳು ಪಾವತಿ ವಿವರಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ, ಏಕೆಂದರೆ ಅನೇಕ ಬ್ಯಾಂಕ್ ಅಧಿಕಾರಿಗಳು ಮತದಾನದ, ಚುನಾವಣೆ ಕೆಲಸದ ಮೇಲೆ ತೆರಳಿದ್ದಾರೆ. ನಿನ್ನೆ ಕೂಡ ನಾವು ಕೆಲವು ಬ್ಯಾಂಕ್ ರಸೀದಿಗಳನ್ನು ಸ್ವೀಕರಿಸಿದ್ದೇವೆ . ಹಿಂದಿನ ಹಣಕಾಸಿನ ವರ್ಷಕ್ಕೆ ಸಂಗ್ರಹಿಸಿದ ಮೊತ್ತವನ್ನು ನಿಖರವಾಗಿ ಲೆಕ್ಕ ಹಾಕಲಾಗದಿದ್ದಲ್ಲಿ, ಬಾಕಿಯನ್ನು (ಯಾವುದಾದರೂ ಇದ್ದರೆ) ಕೂಡ ಸೇರಿಸಬೇಕಾಗಿರುವುದರಿಂದ, ನಾವು ಮಾಲೀಕರಿಂದ ಪಾವತಿಸಲು ಹೊಸ ಆಸ್ತಿ ತೆರಿಗೆ ಅನ್ನು ನವೀಕರಿಸಲು ಸಾಧ್ಯವಾಗದೆ ಹೋಗಲಿದೆ." ಅಧಿಕಾರಿಗಳು ವಿವರಿಸಿದ್ದಾರೆ.
ಸ್ಟ್ಯಾಂಪಿಂಗ್ ಹಾಗೂ ನೊಂದಣಿ ಇಲಾಖೆ ಜನವರಿ 1, 2019ರಿಂದ ಮಾರ್ಗದರ್ಶಿ ಶುಲ್ಕವನ್ನು 5 ರಿಂದ 25 ಪ್ರತಿಶತದವರೆಗೆ ಹೆಚಿಸಿದೆ. ಈ ಮೂಲಕ ಆ ವ್ಯಾಪ್ತಿಯಲ್ಲಿ ಬರುವ ಆಸ್ತಿಯಲ್ಲಿ ನಿಖರವಾದ ಹೆಚ್ಚಳವಿದೆ. ಬಿಡಿಎ ಮಾರ್ಚ್ 2019 ವರೆಗೆ ಅದರ 79,332 ಆಸ್ತಿಗಳಿಂದ ತೆರಿಗೆ ಸಂಗ್ರಹಿಸಿದೆ.ಮೇ ಅಂತ್ಯದವರೆಗೆ ಗಮನಿಸಿದ್ದಾದರೆ ಇದು 97,000 ತಲುಪಲಿದೆ. "ಕೆಂಪೇಗೌಡ ಬಡವಣೆಯ ಎರಡು ಹಂತಗಳಲ್ಲಿಯೂ 10,000 ಸೈಟ್ ಗಳು ಇದಾಗಲೇ ಹಂಚಿಕೆಯಾಗಿದೆ.ಇವುಗಳಲ್ಲಿ ಕೆಲವನ್ನು ಬಿಡಿಎ ಅನುಮತಿಯೊಡನೆ ಖಾಸಗಿ ಡೆವಲಪ್ರ್ ಗಳು ಅಭಿವೃದ್ದಿ ಪಡಿಸಿದ್ದಾರೆ" ಇನ್ನೋರ್ವ ಅಧಿಕಾರಿಯು ಹೇಳಿದ್ದಾರೆ.