ಬೆಂಗಳೂರು: ಪರೀಕ್ಷಾ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪರೀಕ್ಷಾ ಸಂಬಂಧಿತ ವಸ್ತುಗಳನ್ನು ಸಾಗಿಸುವ ಸೇವೆ ಆರಂಭಿಸಲು ರಾಜ್ಯ ಅಂಚೆ ಇಲಾಖೆ ಚಿಂತನೆ ನಡೆಸಿದೆ. ಇದರಿಂದಾಗಿ ಇಲಾಖೆಗೂ ಹೆಚ್ಚಿನ ಆದಾಯ ಬರಲಿದೆ
ಮಾರ್ಚ್ ನಿಂದ ಮೇ ತಿಂಗಳವರೆಗೂ ಪರೀಕ್ಷಾ ಸಂಬಂಧಿತ ಸಾಮಾಗ್ರಿಗಳನ್ನು ಸಾಗಿಸುವ ವಿಶೇಷ ' ಪರೀಕ್ಷಾ ಸೇವೆ' ಆರಂಭಿಸುವ ಕುರಿತು ಯೋಚಿಸಲಾಗಿದೆ. ಈ ವಿಶೇಷ ಸೇವೆಗಾಗಿ ಹೆಚ್ಚುವರಿ ಸಿಬ್ಬಂದಿ ಹಾಗೂ ವಾಹನಗಳನ್ನು ಮೀಸಲಿಡಬೇಕಾಗುತ್ತದೆ ಎಂದು ರಾಜ್ಯ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೊಬೊ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಪರೀಕ್ಷಾ-ಸಂಬಂಧಿತ ವಸ್ತುಗಳ ಸುರಕ್ಷತೆ ಮತ್ತು ರಹಸ್ಯವನ್ನು ಖಾತರಿಪಡಿಸುವ ಮಹತ್ವದ ಕೆಲಸವನ್ನು ಇಲಾಖೆ ತಿಳಿದಿದೆ ಪಿಯುಸಿ, ಸಿಬಿಎಸ್ ಇ , ಎಸ್ ಎಸ್ ಎಲ್ ಸಿ ಮತ್ತಿತರ ನಾಗರಿಕ ಸೇವಾ ಪರೀಕ್ಷೆಗಳನ್ನು ಅಂಚೆ ಇಲಾಖೆ ನಿರ್ವಹಣೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಮಾರ್ಚ್ ತಿಂಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ 39 ವಿಷಯಗಳ ಪರೀಕ್ಷೆಯನ್ನು 1. 007 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದೆ. 28 ಸಾವಿರದ 067 ಬಂಡಲ್ ಉತ್ತರ ಪತ್ರಿಕೆಗಳನ್ನು 56 ಮೌಲ್ಯಮಾಪನ ಕೇಂದ್ರಗಳಿಗೆ ರವಾನಿಸಲಾಗಿದೆ. ಯಾವುದೊಂದು ಪತ್ರಿಕೆ ಕಳೆದುಹೋಗದಂತೆ ಎಲ್ಲಾ ಬಂಡಲ್ ಗಳನ್ನು ಮೌಲ್ಯಮಾಪನ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ಸಿಪಿಎಂಜಿ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos