ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಮಹಿಳೆಯರಿಗೆ ಟ್ರಾನ್ಸಿಟ್ ಹಾಸ್ಟೆಲ್

ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಒಳಗೊಂಡಂತೆ ಎಲ್ಲಾ ರೀತಿಯ ಸ್ವರ್ಧಾತ್ಮಕ

ಬೆಂಗಳೂರು: ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಉದ್ಯೋಗ ಅರಸಿ ಬರುವ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ ಒಳಗೊಂಡಂತೆ ಎಲ್ಲಾ ರೀತಿಯ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಒಂಟಿಯಾಗಿ ಆಗಮಿಸುವ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುರಕ್ಷಿತ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದೆ.
ಇದಕ್ಕಾಗಿ ಬೆಂಗಳೂರಿನಲ್ಲಿ 13 ಟ್ರಾನ್ಸಿಟ್ ವಸತಿ ಗೃಹಗಳನ್ನು ಗುರುತಿಸಿ ಅಲ್ಲಿ ವಾಸ್ತವ್ಯಕ್ಕೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ. 
ಆದಾಯದ ಮಿತಿ ಇಲ್ಲದೆ ಎಲ್ಲಾ ವರ್ಗದ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಈ ವಸತಿ ಗೃಹಗಳಲ್ಲಿ ಉಳಿದುಕೊಳ್ಳಬಹುದಾಗಿದೆ.  ಊಟ-ಉಪಹಾರ ಉಚಿತ ಎಂಬುದು ಈ  ವಸತಿ ಗೃಹಗಳ ಮತ್ತೊಂದು ವಿಶೇಷ. 
ಬೆಂಗಳೂರಿಗೆ ಆಗಮಿಸುವ ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ಸಂಬಂಧಿಕರು ಹಾಗೂ ಸ್ನೇಹಿತರು ಯಾರೂ ಇಲ್ಲದಿದ್ದರೆ ತೀವ್ರ ತೊಂದರೆ ಅನುಭವಿಸುತ್ತಾರೆ. ವಸತಿ ಗೃಹಗಳಲ್ಲಿ ಉಳಿದುಕೊಳ್ಳಲು ಬಹುತೇಕರು ಹಿಂದೇಟು ಹಾಕುತ್ತಾರೆ. ಇಲ್ಲವೆ ಮುಜುಗರ ಪಡುತ್ತಾರೆ, ಅದನ್ನು ತಪ್ಪಿಸುವ ಸಲುವಾಗಿ ಟ್ರಾನ್ಸಿಟ್ ವಸತಿ ಗೃಹಗಳ ವ್ಯವಸ್ಥೆ ಮಾಡಲಾಗಿದೆ. 
ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ಕೆಎಸ್‍ಸಿಡಬ್ಲು ವರ್ಕಿಂಗ್ ವುಮೆನ್ಸ್ ಹಾಸ್ಟೆಲ್ ಜಯಮಲ್ ದೂರವಾಣಿ : 080- 233304846, ಶಾರದ ಕುಟೀರ ಹಾಸ್ಟೆಲ್ ಶಂಕರಪುರ 080-26674697, ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್ ಹಾಸ್ಟೆಲ್ ಮಿಷನ್ ರಸ್ತೆ, 080-22238574, ಯುನಿವರ್ಸಿಟಿ ವುಮೆನ್ ಅಸೋಸಿಯೇಷನ್ ಹಾಸ್ಟೆಲ್ ಸಂಪಂಗಿರಾಮನಗರ  080- 22223314, ಮಹಾತ್ಮಾಗಾಂಧಿ ವಿದ್ಯಾಪೀಠ ಹಾಸ್ಟೆಲ್ ಶಾವಿಗೆ ಮಲ್ಲೇಶ್ವರ ಹಿಲ್ಸ್ 080- 26662226, ಜಯನಗರ ಸ್ತ್ರೀ ಸಮಾಜ ಹಾಸ್ಟೆಲ್ ಜಯನಗರ 080-26674697, ಆಲಸ್ ಇಂಡಿಯಾ ವುಮೆನ್ ಕಾನ್ಪರೆನ್ಸ್ ಹಾಸ್ಟೆಲ್ ಜಯನಗರ 080-26349676 ಬಸವ ಸಮಿತಿ ಹಾಸ್ಟೆಲ್ ಮೈಸೂರು ರಸ್ತೆ 080-22723355, ವಿಶಾಲ್ ವಿದ್ಯಾಸಂಸ್ಥೆ ಹಾಸ್ಟೆಲ್ ಕನಕಪುರ ಮುಖ್ಯ ರಸ್ತೆ, 9341289653, ಹೆಚ್‍ಡಿಎಸ್ ಹಾಸ್ಟೆಲ್ ಕೆಜಿಐಡಿ ಕಾಲೋನಿ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಹಾಸ್ಟೆಲ್ ನಾಗರಭಾವಿ ಕ್ಯಾಂಪಸ್ 080-23160531, ಯಂಗ್ ವುಮೆನ್ ಕ್ರಿಶ್ಚಿಯನ್ ಅಸೋಸಿಯೇಷನ್  ಹಾಸ್ಟೆಲ್ ಕೋರಮಂಗಲ 080-25634813, ರೀಜಿನಲ್ ಇನ್‍ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಹಾಸ್ಟೆಲ್, ಜ್ಞಾನಭಾರತಿ ಕ್ಯಾಂಪಸ್ 080-23213243 ಇಲ್ಲಿ ಅವಕಾಶ ಕಲ್ಪಿಸಲಾಗಿದೆ. 
ಬೆಂಗಳೂರಿಗೆ  ಆಗಮಿಸುವ  ಮುನ್ನ ಆಯಾ ವಸತಿ ನಿಲಯಗಳ ದೂರವಾಣಿಗೆ ಕರೆ ಮಾಡಿ ಕೊಠಡಿ ಕಾಯ್ದಿರಿಸಬೇಕು. ಜೊತೆಗೆ, ಪರೀಕ್ಷೆಯ ಪ್ರವೇಶ ಪತ್ರ, ಕೆಲಸಕ್ಕೆ ಸಂದರ್ಶನ ಕರೆ ಪತ್ರ ಅಥವಾ ನೇಮಕಾತಿ ಆದೇಶ ಹಾಜರುಪಡಿಸಬೇಕು. ಅಲ್ಲದೆ ಆಧಾರ್ ಕಾರ್ಡ್ ತಪ್ಪದೇ ತರಬೇಕು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT