ಸಚಿವ ಸಿ.ಎಸ್. ಶಿವಳ್ಳಿ ಪ್ಪುತ್ರಿ ರೂಪಾ
ಹುಬ್ಬಳ್ಳಿ: ಕುಂದಗೋಳದ ಶಾಸಕ, ಸಚಿವ ಸಿ.ಎಸ್. ಶಿವಳ್ಳಿ ನಿಧನವಾದ ದಿನವೇ ಸಿಬಿಎಸ್‍ಇ ಹತ್ತನೇ ತರಗತಿ ಪರೀಕ್ಷೆ ಬರೆದಿದ್ದ ಅವರ ಪ್ಪುತ್ರಿ ರೂಪಾ ಉತ್ತಮ ಫಲಿತಾಶ ಪಡೆದಿದ್ದಾರೆ. ಇಂದು (ಸೋಮವಾರ) ಪ್ರಕಟವಾಗಿರುವ ಸಿಬಿಎಸ್‍ಇ ಹತ್ತನೇ ತರಗತಿಯ ಫಲಿತಾಶದಲ್ಲಿ ಶಿವಳ್ಳಿ ಅವರ ಎರಡನೇ ಪುತ್ರಿ ರೂಪಾಗೆ ಶೇ.76ರಷ್ಟು ಅಂಕ ಲಭಿಸಿದೆ.
ರೂಪಾ ತಂದೆ ಸಚಿವ ಶಿವಳ್ಳಿ ಹೃದಯಾಘಾತದಿಂದ ನಿಡನವಾಗಿದ್ದ ದಿನವೇ ಆಕೆಗೆ ಇಂಗ್ಲೀಷ್ ಪರೀಕ್ಷೆ ಇತ್ತು. ಕಣ್ಣೀರು ಹಾಕುತ್ತಾ ದುಃಖದ ನಡುವೆಯೇ ಪರೀಕ್ಷೆ ಬರೆದಿದ್ದ ಆಕೆ ಪರೀಕ್ಷೆ ಮುಗಿಸಿದ ಬಳಿಕ ತಂದೆಯವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರು.
"ನಮ್ಮ ತಂದೆ ನಿಧನವಾದ ದಿನ ನಾನು ಪರೀಕ್ಷೆಗೆ ಹಾಜರಾಗಿದ್ದೆ. ನಾನು ಶೇ. 76 ಅಂಕ ಗಳಿಸಿದ್ದೇನೆ. ಮುಂದೆ ನಾನು ಸಮಾಜ ಸೇವೆ ಮಾಡಬೇಕೆನ್ನುವುದು ನನ್ನ ತಂದೆಯ ಬಯಕೆಯಾಗಿತ್ತು. ಈ ಫಲಿತಾಶದ ಮೂಲಕ ಅವರ ಕನಸು ನನಸಾಗಿಸಲು ಹೊರಟಿದ್ದೇನೆ." ಮಾದ್ಯಮದವರೊಂದಿಗೆ ಮಾತನಾಡಿದ ರೂಪಾ ಹೇಳಿದ್ದಾರೆ.
ತೀವ್ರ ಹೃದಯಾಘಾತವಾಗಿ ಸಚಿವ, ಕುಂದಗೋಳದ ಶಾಸಕ ಸಿ.ಎಸ್. ಶಿವಳ್ಳಿ ಕಳೆದ ಮಾರ್ಚ್ 22ರಂದು ನಿಧನವಾಗಿದ್ದರು.