ಬೆಂಗಳೂರಿನಲ್ಲೊಂದು ವಿಚಿತ್ರ ಪ್ರಸಂಗ: ಚಿಕಿತ್ಸೆ ಫಲಿಸದೆ ಬೀದಿನಾಯಿ ಸತ್ತದ್ದಕ್ಕೆ ವೈದ್ಯರ ವಿರುದ್ಧ ದೂರು ದಾಖಲು!
ನಾಯಿಯ ಸಂತಾನ ಹರಣ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷದಿಂದ ಬೀದಿ ನಾಯಿಯೊಂದು ಸತ್ತಿದ್ದಕ್ಕಾಗಿ ಎನ್ಜಿಒ ಮತ್ತು ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ಬೆಂಗಳುರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಬೆಂಗಳೂರು: ವಿಚಿತ್ರ ಪ್ರಸಂಗವೊಂದರಲ್ಲಿ ನಾಯಿಯ ಸಂತಾನ ಹರಣ ಚಿಕಿತ್ಸೆ ವೇಳೆ ವೈದ್ಯರ ನಿರ್ಲಕ್ಷದಿಂದ ಬೀದಿ ನಾಯಿಯೊಂದು ಸತ್ತಿದ್ದಕ್ಕಾಗಿ ಎನ್ಜಿಒ ಮತ್ತು ವೈದ್ಯರ ವಿರುದ್ಧ ಎಫ್ಐಆರ್ ದಾಖಲಿಸಿರುವ ಘಟನೆ ಬೆಂಗಳುರಿನ ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ವೈದ್ಯರ ತಪ್ಪಿನಿಂಡಾಗಿ ಬೀದಿನಾಯಿ ಸಾವನ್ನಪ್ಪಿದೆ, ಜೂಲಿ ಹೆಸರಿನ ಈ ನಾಯಿ ನಮಗೆಲ್ಲಾ ಅಚ್ಚುಮೆಚ್ಚಿನದಾಗಿತ್ತು. ಇದೀಗ ನಾಯಿಯ ಸಾವಿಗೆ ಕಾರಣವಾದ ಎನ್ಜಿಒ ಮತ್ತು ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸ್ಥಳೀಯರು ಬೈಯಪ್ಪನಹಳ್ಳಿ ಪೋಲೀಸರಿಗೆ ದೂರಿತ್ತಿದ್ದಾರೆ.
ಘಟನೆ ವಿವರ
ಸುಷ್ಮಾ ಎಂಟರ್ ಪ್ರೈಸಸ್ ಹೆಸರಿನ ಎನ್ಜಿಒ ಸದಸ್ಯರು ಜೂಲಿಯನ್ನು ಕೆಲದಿನಗಳ ಹಿಂದೆ ಸಂತಾನಹರಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆ ಮುಗಿದ ಬಳಿಕ ಅವರು ನಾಯಿಯನ್ನು ಬೀದಿಯಲ್ಲೇ ಬಿಟ್ಟು ಹೋಗಿದ್ದಾರೆ. ಏಳು ತಿಂಗಳ ನಾಯಿ ಜೂಲಿ ಶಸ್ತ್ರಚಿಕಿತ್ಸೆ ಪಡೆದ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದೆ.
ಈ ಕುರಿತಂತೆ ಸ್ಥಳೀಯ ನಿವಾಸಿಯಾದ ನವೀನ್ ಕಾಮತ್ ಎನ್ಜಿಒ ಸಂಸ್ಥೆಯ ಮುಖ್ಯಸ್ಥ ಅರುಣಾ ರೆಡ್ಡಿ ಹಾಗೂ ಶಸ್ತ್ರಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ದೂರುದಾಖಲಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.