ರಾಜ್ಯ

ಬೆಂಗಳೂರು: ರಸ್ತೆ ಮಧ್ಯೆ ಧಗಧಗನೇ ಹೊತ್ತಿ ಉರಿದ ಖಾಸಗಿ ಬಸ್‌, 40 ಪ್ರಯಾಣಿಕರು ಅಪಾಯದಿಂದ ಪಾರು

Shilpa D
ಬೆಂಗಳೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಬಸ್ ಚಾಲಕ ಮತ್ತು ಅಕ್ಕಪಕ್ಕದ ವಾಹನ ಚಾಲಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಬಸ್‌ನಲ್ಲಿ 40 ಮಂದಿ ಪ್ರಯಾಣಿಕರಿದ್ದು ಅದೃಷ್ಟವಷಾತ್‌ ಎಲ್ಲರೂ ಪಾರಾಗಿದ್ದಾರೆ.
ಬೆಂಕಿ ಹೊತ್ತಿ ಉರಿಯುತ್ತಿದ್ದಂತೆ ಪಕ್ಕದಲ್ಲಿ ಚಲಿಸುತ್ತಿದ್ದ ವಾಹನಗಳ ಚಾಲಕರು ತಿಳಿಸಿದ್ದು ಕೂಡಲೇ ಬಸ್‌ ನಿಲ್ಲಿಸಲಾಗಿದೆ. 
ಇಡೀ ಶರ್ಮಾ ಟ್ರಾವೆಲ್ಸ್ ಬೆಂಕಿಗಾಹುತಿಯಾಗಿದೆ. ಬೆಂಗಳೂರಿನಿಂದ ತಮಿಳುನಾಡಿನ ತಿಪಟ್ಟುಗೆ ಶರ್ಮಾ ಟ್ರಾವೆಲ್ಸ್‌ನ ಬಸ್ ತೆರಳುತ್ತಿತ್ತು. ಆದರೆ ಬೆಳಗಿನ ಜಾವ ಸುಮಾರು 4 ಗಂಟೆಗೆ ಕರ್ನಾಟಕ – ತಮಿಳುನಾಡು ಗಡಿ ಶೂಲಗಿರಿ ಸಮೀಪ ಬಸ್ಸಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬಸ್ ಇಂಜಿನ್ ಬಳಿ ಬೆಂಕಿ ಕಾಣಿಸಿಕೊಂಡ ಕೂಡಲೇ ಇದನ್ನು ಅಕ್ಕಪಕ್ಕದ ವಾಹನ ಸವಾರರು ನೋಡಿದ್ದು, ತಕ್ಷಣ ಬಸ್ ಚಾಲಕನಿಗೆ ತಿಳಿಸಿದ್ದಾರೆ. ಕೂಡಲೇ ಪ್ರಯಾಣಿಕರನ್ನು ಚಾಲಕ ಬಸ್ಸಿನಿಂದ ಕೆಳಗಿಳಿಸಿದ್ದಾನೆ. ಈ ಮೂಲಕ ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬೆಳಗಿನ ಜಾವ ಆದ್ದರಿಂದ ಸ್ಥಳಕ್ಕೆ ಅಗ್ನಿಶಾಮಕ ದಳದವರು ಬರುವುದು ತಡವಾಗಿದ್ದು, ಬಸ್ಸಿನಲ್ಲಿದ್ದ ಸಾಮಾನು ಮತ್ತು ಲಗೇಜು ಸಂಪೂರ್ಣ ಸುಟ್ಟು ಹೋಗಿದ್ದು, ಬಸ್ ಕೂಡ ಬೆಂಕಿಗಾಹುತಿಯಾಗಿದೆ.
SCROLL FOR NEXT