ರಾಜ್ಯ

ಬೆಳಗಾವಿ: ಕರಡಿಗಳ ಹಿಂಡು ದಾಳಿಯಿಂದ ಬಾಲಕನನ್ನು ರಕ್ಷಿಸಿದ ಸಾಹಸಿ ಹುಡುಗ!

Nagaraja AB

ಬೆಳಗಾವಿ: ಖಾನಾಪುರ ಅರಣ್ಯದಲ್ಲಿ ಎರಡು ಮರಿ ಕರಡಿಗಳು ಸೇರಿದಂತೆ ಮೂರು ಕರಡಿಗಳ ದಾಳಿಯಿಂದ 14 ವರ್ಷದ ಬಾಲಕನನ್ನು 13 ವರ್ಷದ ಸಾಹಸಿ ಬಾಲಕನೋರ್ವ ಪ್ರಾಣಪಾಯದಿಂದ ಪಾರು ಮಾಡಿರುವ ಘಟನೆ ನಡೆದಿದೆ.

ಮರದ ತುಂಡಿನಿಂದ ಕರಡಿಗಳ ಬಾಯಿಗೆ ತುತ್ತಾಗಬೇಕಿದ್ದ ಸೋದರ ಸಂಬಂಧಿಯನ್ನು ರಕ್ಷಿಸಿದ ಸಚಿನ್ ರಾತ್ರೋ ರಾತ್ರಿ ಖಾನ್ ಪುರ ತಾಲೂಕಿನಲ್ಲಿ ಪ್ರಸಿದ್ಧಿಯಾಗಿದ್ದಾನೆ. ಪ್ರಾಣ ಪಣಕ್ಕಿಟ್ಟು ಹೋರಾಡಿ ತನ್ನ ಸಂಬಂಧಿಯನ್ನು ರಕ್ಷಿಸಿದ ಈ ಹುಡುಗನಿಗೆ ಅನೇಕ ನಾಯಕರು ಸನ್ಮಾನ ಮಾಡುತ್ತಿದ್ದಾರೆ.

ಕರಡಿ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಗಣೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕರಡಿ ದಾಳಿಯಿಂದಾಗಿ ಆತನ ಎರಡು ಕೈಗಳು ಹಾಗೂ ತಲೆಗೆ ಗಾಯಗಳಾಗಿರುವುದಾಗಿ ಸಚಿನ್ ಪೋಷಕರು ಹೇಳಿದ್ದಾರೆ.

ಹಳಿಯಾಳದ ಸಚಿನ್ ಬೇಸಿಗೆ ರಜೆ ಹಿನ್ನೆಲೆಯಲ್ಲಿ ತಾವರಕಟ್ಟಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದು, ಭಾನುವಾರ ರಾತ್ರಿ ಗಣೇಶ್ ಹಾಗೂ ಇನ್ನಿಬ್ಬರೊಂದಿಗೆ ಖಾನ್ ಪುರ ಅರಣ್ಯದೊಳಗೆ ಹೋಗಿದ್ದಾರೆ. ಗೋಡಂಬಿ ಬೀಜಗಳು ಹಾಗೂ ಹಲಸಿನ ಮರ ಹುಡುಕುವ ವೇಳೆಯಲ್ಲಿ ಕರಡಿಗಳು ಅವರ ಮೇಲೆ ದಾಳಿ ಮಾಡಿವೆ.
ತಕ್ಷಣವೇ ಅವರೆಲ್ಲರೂ ಮನೆ ಕಡೆಗೆ ಬಿದ್ದಂಬೀಳ ಓಡತೊಡಗಿದ್ದಾರೆ. ಆದರೆ, ಗಣೇಶ್ ಓಡುತ್ತಿರುವಾಗ ಕೆಳಗೆ ಬಿದಿದ್ದು, ಕರಡಿಗಳ ದಾಳಿಗೆ ಸಿಕ್ಕಿದ್ದಾನೆ . ಇದನ್ನು ನೋಡಿದ ಸಚಿನ್, ಮರದ ತುಂಡಿನ ಸಹಾಯದಿಂದ ಕರಡಿಗಳನ್ನು ಅಲ್ಲಿಂದ ಓಡಿಸಿ  ಗಣೇಶ್  ಪ್ರಾಣ ರಕ್ಷಿಸಿದ್ದಾನೆ.
SCROLL FOR NEXT