ಬೆಂಗಳೂರು: ಮಗುವೇ ಕ್ಷಮಿಸು ಎಂದು ಡೆತ್ ನೋಟ್ ಬರೆದು ಗೃಹಿಣಿ ಆತ್ಮಹತ್ಯೆ 
ರಾಜ್ಯ

ಬೆಂಗಳೂರು: ಮಗುವೇ ಕ್ಷಮಿಸು ಎಂದು ಡೆತ್ ನೋಟ್ ಬರೆದು ಗೃಹಿಣಿ ಆತ್ಮಹತ್ಯೆ

ತನ್ನ ಸಾವಿಗೆ ಪತಿ ಹಾಗೂ ಅವರ ಅಕ್ಕನೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

ಬೆಂಗಳೂರು: ತನ್ನ ಸಾವಿಗೆ ಪತಿ ಹಾಗೂ ಅವರ ಅಕ್ಕನೇ ಕಾರಣವೆಂದು ಡೆತ್ ನೋಟ್ ಬರೆದಿಟ್ಟು ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ. ಇದೇ ವೇಳ ಆಕೆ ತನ್ನ ಮಗುವಿಗೆ "ತನ್ನನ್ನು ಕ್ಷಮಿಸು" ಎಂದು  ಬರೆದು ಸಾವಿಗೆ ಶರಣಗಿದ್ದಾಳೆ.
ಮಂಜುಳಾ (27) ಸಾವಿಗೀಡಾದ ದುರ್ದೈವಿ ಮಹಿಳೆಯಾಗಿದ್ದು ಈಕೆ ಕಳೆದ ಮೂರು ವರ್ಷದ ಹಿಂದೆ ಗಿರೀಶ್ ಎಂಬಾತನನ್ನು ವಿವಾಹವಾಗಿದ್ದಳು.
 ಆಕೆಯ ಪತಿ ಮನೆಯವರು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದರು. ಇದರಿಂಡ ಬೇಸತ್ತು ಮಂಜುಳಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.ಅಲ್ಲದೆ ಮಂಜುಳಾ ಸಹ ಡೆತ್ ನೋಟ್ ನಲ್ಲಿ ಪತಿ ಮನೆಯಲ್ಲಿನ ಕಿರುಕುಳದ ಬಗ್ಗೆ ವಿವರಿಸಿದ್ದಾಳೆ.
"ನನಗೆ ಜೀವನ ಕಷ್ಟವಾಗಿದೆ, ಪತಿ ಗಿರೀಶ್ ಹಾಗೂ ಆತನ ಅಕ್ಕ ಶಾರದಾ ಬಹಳ ಕಷ್ತ ಕೊಡುತ್ತಿದ್ದಾರೆ. ನನ್ನ ಸಾವಿಗೆ ಅವರೇ ಕಾರಣ. ಕಾನೂನು ಅನುಸಾರ ಅವರಿಗೆ ಶಿಕ್ಷೆಯಾಗಲಿ" ಆಕೆ ಹೇಳಿದ್ದಾಳೆ.
ಅಲ್ಲದೆ"ನನ್ನ ಗಂಡು ಮಗುವನ್ನು ನನ್ನ ತಾಯಿಗೆ ನೀಡಿರಿ, ನನ್ನ ಅಪ್ಪ ಅಮ್ಮ ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ. ಮಗುವೇ ನನ್ನನ್ನು ಕ್ಷಮಿಸು" ಎಂದು ಆಕೆ ತನ್ನ ಪೋಷಕರು ಹಾಗೂ ಮಗುವಿಗೆ ಕೇಳಿದ್ದಾರೆ.
ಇನ್ನೊಂದೆಡೆ ಮಂಜುಳಾ ಪೋಷಕರು ವರದಕ್ಷಿಣೆ ಆಸೆಗಾಗಿ ತನ್ನ ಮಗಳನ್ನು ಪತಿ ಗಿರೀಶ್ ಮನೆಯವರೇ ಕೊಂದಿದ್ದಾರೆ ಎಂದು ದೂರಿದ್ದಾರೆ. 
ಇದೀಗ ಮಂಜುಳಾ ಪತಿ ಗಿರೀಶ್ ನನ್ನು ವಶಕ್ಕೆ ಪಡೆದಿರುವ ಪೋಲೀಸರು ಶವವನ್ನು ಮರಣೋತ್ತರ ಪರೀಶ್ಕೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel